ಸರಕಾರಿ ಆದರ್ಶ ವಿಧ್ಯಾನಿಲಯಕ್ಕೆ ಮೂಲಭೂತ ಸೌಲಭ್ಯ ನೀಡಲು , ಶಾಸಕ ನಾಡಗೌಡರಿಗೆ ಮನವಿ
ವರದಿ: ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೆಬಿಹಾಳ : ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಬರವ ಸರಕಾರಿ ಆರ್ ಎಂ ಎಸ್ ಎ ಶಾಲೆಗೆ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಎಸ್ ಡಿ ಎಂಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಸದಸ್ಯರ ಒಳಗೊಂಡ ಶಾಲಾ ಸಿಬ್ಬಂದ್ದಿ ಸೋಮವಾರ ಬೆಳಗ್ಗೆ ಪಟ್ಟಣದ ಶಾಸಕರ ಗೃಹಕಚೇರಿ ಸಿ.ಎಸ.ನಾಡಗೌಡರಿಗೆ ಬೇಟೆಯಾಗಿ ಮನವಿ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಶಾಲಾ ಎಸ್ ಡಿ ಎಂಸಿ ಸದಸ್ಯರಾದ ಬಂದೇನವಾಜ ಕುಮಸಿ ಮಾತನಾಡಿ ಶಾಲೆಯ ಮೂಲಭೂತ ಸೌಲಭ್ಯಗಳಿಂದ ಕುಂಟಿತವಾಗಿದೆ,ಸಧ್ಯ. ಶಾಲೆಯಲ್ಲಿ 550 ರಷ್ಟು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.
ಆದರೆ ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಖಾಯಂ ಶಿಕ್ಷಕರ ನೇಮಕಾತಿ ಮಾಡಬೇಕು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೈಟೆಕ್ ಶೌಚಾಲಯ, ಬಿಸಿ ಊಟದ ಕೋಣೆ ಮತ್ತು 600 ಮಕ್ಕಳು ಒಂದೆ ಬಾರಿಗೆ ಕುಳಿತು ಊಟ ಮಾಡುವಷ್ಟು ಭೋಜನಾಲಯ ನಿರ್ಮಾಣ ಮಾಡಬೇಕು, ಮಕ್ಕಳಿಗೆ ಕುಡಿಯುವ ನೀರಿಗಾಗಿ ಒಂದೆ ಕೋಳವೆ ಬಾವಿ ಇದ್ದು ಇನ್ನೊಂದು ಕೊರೆಸಿ ಕೋಡಬೇಕು, ಇಲ್ಲವೇ ಪಟ್ಟಣದಿಂದ ಕೃಷ್ಣಾ ನದಿಯ ಸಿಹಿ ನೀರಿನ ಸಂಪರ್ಕವನ್ನು ಒದಗಿಸಬೇಕು.
ಶಾಲೆಯ ಅಡುಗೆ ವ್ಯವಸ್ಥೆಯ , ಶೌಚಾಲಯಗಳ ನೀರು ಹರಿದು ಹೋಗಲು ಅವಕಾಶ ಇಲ್ಲದಿರುವದರಿಂದ ಮಲೀನತೆ ಉಂಟಾಗಿದೆ, ಆದರಿಂದ ಒಳಚರಂಡಿ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಆಟವಾಡಲು ಸಮತಟ್ಟಾದ ಮೈದಾನ ಮತ್ತು ಶಾಲಾ ಸೌಂಧರ್ಯ ಹೆಚ್ಚಿಸಲು ಉದ್ಯಾನವನ ನಿರ್ಮಾಣ ಮಾಡಬೇಕು ಶಾಲೆಗೆ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು ದುರಸ್ಥಿಗೊಳಿಸಬೇಕು ಎಂದು ಶಾಸಕ ನಾಡಗೌಡರಲ್ಲಿ ವಿಶೇಷ ಮನವಿ ಮಾಡಿಕೊಂಡರು.
ಮನವಿಯನ್ನು ಸ್ವೀಕರಿಸಿದ ಶಾಸಕರು ನೂತನ ಅಧ್ಯಕ್ಷರಾದ ಪೂರ್ಣಿಮಾ ಬೆಳಗಲ್ಲ ಇವರನ್ನು ಸನ್ಮಾನಿಸಿ ಮತ್ತು ಬೇಡಿಕೆಗಳು ಅತ್ಯಂತ ಮಹತ್ವದ್ದವುಗಳಾಗಿದ್ದು ಶಾಲಾ ಆಡಳಿತಕ್ಕೆ ಅನುಕೂಲಕ್ಕೆ ಎಲ್ಲಾ ಬೇಡಿಕೆಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಮನೋಹರ ಪಾಟೀಲ, ನಿಂಗನಗೌಡ ಬಿರಾದಾರ,ಯಲ್ಲಪ್ಪ ಮ್ಯಾಗೇರಿ, ಮಂಜುಳಾ ಹಡಗಲಿ, ನಿಂಗನಗೌಡ ಬಿರಾದಾರ (ಅಪ್ಪು) ಗೀತಾ ನಾಲತವಾಡ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್, ಮುಖ್ಯೋಪಾದ್ಯಾಯರಾದ ಅನೀಲಕುಮಾರ ರಾಠೋಡ, ಸಿಬ್ಬಂದಿಗಳಾದ ಎನ್ ಎಸ್ ಬಿರಾದಾರ,ಸಂಗಮೇಶ ಸಜ್ಜನ,ಸೇರಿದಂತೆ ಉಪಸ್ಥಿತರಿದ್ದರು.