“ಥ್ರೋ ಬಾಲ್” ಕರ್ನಾಟಕ ತಂಡಕ್ಕೆ ಇಂಡಿಯ ರಾಜೇಶ್ ಆಯ್ಕೆ.
ಇಂಡಿ : ಜಾರ್ಖಂಡ್ ನ ರಾಂಚಿಯಲ್ಲಿ ರಾಷ್ಟ್ರೀಯ ಥ್ರೋ ಬಾಲ್ ಸೆ-21 ರಿಂದ 23 ರವರೆಗೆ ನಡೆಯುವ ಪಂದ್ಯಕ್ಕೆ ಕರ್ನಾಟಕ ತಂಡಕ್ಕೆ ರಾಜೇಶ ಪವಾರ ಆಯ್ಕೆಯಾಗಿದ್ದಾರೆ.
ಹೌದು ಸೆ- 2 ರಂದು ಕರ್ನಾಟಕ ಪ್ಯಾರಾ ಥ್ರೋ ಬಾಲ್ ಅಶೋಶಿಯನ್ ಕರ್ನಾಟಕ ಥ್ರೋ ಬಾಲ್ ತಂಡದ ಆಟಗಾರರ ಪಟ್ಟ ಬಿಡುಗಡೆ ಮಾಡಿದೆ. ಅದರಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರ ತಾಂಡಾದ ರಾಜೇಶ ಪವಾರ ಆಯ್ಕೆಯಾಗಿದ್ದಾರೆ. ಅದಕ್ಕೆ ತಾಲ್ಲೂಕಿನ ಕ್ರೀಡಾ ಅಭಿಮಾನಿಗಳು ಹಾಗೂ ಆಪ್ತ ಸ್ನೇಹಿತರು ಅಭಿನಂದನೆ ತಿಳಿಸಿದ್ದಾರೆ.
ಕರ್ನಾಟಕ ತಂಡದಲ್ಲಿ ಆಯ್ಕೆಯಾದ ಆಟಗಾರರ ಪಟ್ಟಿ – 2024
ನಾಯಕ ಮೌನೇಶ್ ಎಮ್ ಮರಾಥೆ, ಉಪನಾಯಕ ಹರೀಶ್ ಶಿವನ್ನನವರ, ಶರಣಯ್ಯ ಸಾಲಿಮಠ, ಲಕ್ಷ್ಮಣ ಪತ್ತಗಿರಿ,ಲಕ್ಷ್ಮಣ ಮಾದರ, ಬಸವರಾಜ ಕೆ, ಶಶಿಧರ ಬಂಗಾರಿ,ರಾಜೇಶ್ ಪವಾರ,
ಕೊಚ್ ಮಹೇಶಕುಮಾರ ಅಗಲಿ, ಮೆಂಟರ್ ಮಹಾಂತೇಶ ಛಲವಾದಿ.