ಅಫಜಲಪುರ: ಕಣ್ಣುಗಳು ಮಾನವನ ದೇಹದ ಅತ್ಯಂತ ಪ್ರಮುಖ ಅಂಗವಾಗಿವೆ. ಪ್ರಪಂಚವನ್ನು ನೋಡಿ ಆನಂದಿಸಲು ಕಣ್ಣುಗಳು ಅತ್ಯವಶ್ಯವಿದ್ದು, ಅವುಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮಾಜಿ ಜಿ, ಪಂ, ಸದಸ್ಯ ಅರುಣಕುಮಾರ ಎಂ ಪಾಟೀಲ ಹೇಳಿದರು. ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ, ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಶ್ರೀ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ಶಾಸ್ತ್ರ ವಿಭಾಗ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಸಮುದಾಯ ಕಣ್ಣಿನ ಆರೋಗ್ಯ ಯೋಜನೆ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿ ತಾಲೂಕಿನಾದ್ಯಂತ ಹಲವಾರು ಶಿಬಿರಗಳನ್ನು ಆಯೋಜನೆ ಮಾಡಿ ಸಾವಿರಾರು ಜನರಿಗೆ ನೆರವು ಒದಗಿಸಲಾಗಿದೆ. ಆರೋಗ್ಯವೇ ಭಾಗ್ಯ ಎನ್ನುವಂತೆ
ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.
ಆರೋಗ್ಯವಂತ ಮನುಷ್ಯ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಂದು ಹೇಳಿದರು.
ಮಾಶಾಳದ ಕೇದಾರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ: ರತ್ನಾಕರ ತೋರಣ ಆಡಳಿತ ವೈದ್ಯಾಧಿಕಾರಿ ಡಾ: ರವಿಕಿರಣ, ಬಾಬಾಸಾಹೇಬ ಪಾಟೀಲ, ದೊಡ್ಡಪ್ಪ ಹತ್ತಳ್ಳಿ, ಶಿವರುದ್ರಪ್ಪ ಅವಟೆ, ಜ್ಞಾನೇಶ್ವರಿ ಪಾಟೀಲ, ತಾ,ಪಂ, ಮಾಜಿ ಸದಸ್ಯ ರಾಜಕುಮಾರ ಬಬಲಾದ, ವಿ ಎಸ್ ಎಸ್ ಎನ್ ಅಧ್ಯಕ್ಷ ಶಿವು ಪ್ಯಾಟಿ, ಸಭಾಪತಿ ಕುಲಕರ್ಣಿ ಸಿದ್ದು ಫತಾಟೆ, ಅಭಿಷೇಕ, ಪಾಟೀಲ, ಡಾ,ಅಬೀದ್, ಡಾ,ವಜೀಯಾ, ಡಾ,ವಿಜಯ ಪೂಜಾರಿ, ಡಾ, ಐಶ್ವರ್ಯ ದಂಡೋತಿ ಡಾ ಸುರೇಶ ಬಂಡಗಾರ ಸತೀಶ ಸೇರಿದಂತೆ ಇತರರಿದ್ದರು.