ಕಾಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ..
ಹನೂರು: ತಾಲೂಕಿನ ಸೂಳ್ಳೇರಿಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ವಿದ್ಯಾರ್ಥಿಗಳ ಬೆಳವಣಿಗೆ ಹಾಗೂ ಅವರ ಏಳಿಗೆಗೆ ಶಿಕ್ಷಕ ವೃಂದದವರ ಮಾರ್ಗದರ್ಶನ ಅತ್ಯವಶ್ಯಕವಾಗಿದೆ. ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶಿಕ್ಷಕರಿಗೆ ಹಲವಾರು ಕ್ರೀಡೆಗಳನ್ನು ಆಯೋಜಿಸಿದ್ದರು. ಕ್ರೀಡೆಯಲ್ಲಿ ಜಯಗಳಿಸಿದ ಶಿಕ್ಷಕರಿಗೆ ಬಹುಮಾನವನ್ನು ವಿತರಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂಚಳ್ಳಿ ಈ ಶಾಲೆಯಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿ ವರ್ಗಗೊಂಡಂತಹ ರವಿ, ಮಾದಪ್ಪ, ಹಾಗೂ ಸತ್ಯ ಪ್ರೇಮ ಶಿಕ್ಷಕರುಗಳಿಗೆ ಸನ್ಮಾನ ಮಾಡಿ, ಬೀಳ್ಕೊಡುಗೆ ಕೊಟ್ಟ ವಿದ್ಯಾರ್ಥಿ ಸಮೂಹದವರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ವೆಂಕಟೇಶ್ ಟಿ,ಶಿಕ್ಷಕರಾದ ರೂಹುಲ್ಲಾ,ರಾಯಪ್ಪನ್ ಎ , ಪರಿಮಳ ಎಂ, ಮಾತಿ ಎಸ್ , ಕರ್ನಾಟಕ ಪತ್ರಕರ್ತರ ಸಂಘದ ಕಾರ್ಯದರ್ಶಿ ಕಾಂಚಳ್ಳಿ ಬಸವರಾಜು ,ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತುರಾಜು ,ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವರಾಜು,ಗ್ರಾಮಸ್ಥರಾದ ಇರಸೇಗೌಡ, ಡಿ ಕೆ ಶ್ರೀನಿವಾಸ್ , ನಂಜುಂಡೆಗೌಡ,ಹೋಲಿಕ್ರಾಸ್ ಕಾರ್ಯ ನಿರ್ವಾಹಕರಾದ ಕಾಂತರಾಜು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.