ಸುಳ್ವಾಡಿಯಲ್ಲಿ ಫಾತಿಮಾ ಮಾತೆಯ ವಾರ್ಷಿಕ ಹಬ್ಬ
ಹನೂರು: ತಾಲ್ಲೂಕಿನ ಸುಳ್ವಾಡಿಯಲ್ಲಿ ಫಾತಿಮಾ ಮಾತೆಯ ದೇವಾಲಯ ವಾರ್ಷಿಕ ಹಬ್ಬ ಭಾನುವಾರ ಆಚರಿಸಲಾಯಿತು. ಅದರ ಅಂಗವಾಗಿ ಬೆಳೆಗೆ ಗುರುಗಳಿಂದ ದಿವ್ಯ ಬಲಿಪೂಜೆ ನೆರವೇರಿಸಲಾಯಿತು. ನಂತರ ಪ್ರತಿ ವರ್ಷ ವಾಲಿಬಾಲ್ ಪಂದ್ಯಾವಳಿ,ಹಬ್ಬದ ದಿನದಂದು ನಡೆಯುತ್ತದೆ.ಅದೇ ರೀತಿ ಈ ವರ್ಷ 34ನೇ ವಾಲಿಬಾಲ್ ಪಂದ್ಯಾವಳಿ ಸುಳ್ವಾಡಿಯಲ್ಲಿ ನಡೆಯಿತು. ಸುಮಾರು 15 ತಂಡಗಳು ಭಾಗವಹಿಸಿ ಸುಳ್ವಾಡಿ ಮತ್ತು ಪಾಳಿಮೇಡು ತಂಡಗಳು ಅಂತಿಮ ಪಂದ್ಯಕೆ ಆಯ್ಕೆಯಾಗಿ ಪಾಳಿಮೇಡು ತಂಡ ಅದ್ಭುತ ಗೆಲುವು ದಾಖಲಿಸಿದರು.
ರಾತ್ರಿ ಭವ್ಯ ತೆರಿನ ಮೆರವಣಿಗೆ ಮಾಡುವ ಮೂಲಕ ಕ್ರೈಸ್ತ ಬಾಂಧವರು ಸಂಭ್ರಮ ಸಡಗರದಿಂದ ಆಚರಣೆ ಮಾಡಿದರು.ಈ ಹಿನ್ನಲೆಯಲ್ಲಿ ವಿಶೇಷವಾಗಿ ವಿದ್ಯುತ್ ದೀಪಾಲಂಕಾರದಿಂದ ಅಲಂಕೃತವಾದ ಭವ್ಯ ತೇರನ್ನು ಸುಳ್ವಾಡಿ ಸುತ್ತಮುತ್ತ ಮೆರವಣಿಗೆಯನ್ನು ಮಾಡಲಾಯಿತು. ಈ ವೇಳೆ ಭಕ್ತಾದಿಗಳು ಪ್ರಾರ್ಥನೆ ಹಾಗೂ ಸ್ತುತಿ ಪ್ರಾರ್ಥನಾ ಭಕ್ತಿ ಗೀತೆಗಳನ್ನು ಹಾಡುವ ಮೂಲಕ ಮಾತೆಗೆ ನಮನಗಳನ್ನು ಸಲ್ಲಿಸಿದರು. ಭಕ್ತಾದಿಗಳು ಫಾತಿಮಾ ಮಾತೆಗೆ ನಮಿಸುವ ಮೂಲಕ ತನ್ನ ಇಷ್ಟಾರ್ಥಗಳನ್ನು ಸಿದ್ಧಿಸುವಂತೆ ಮಾತೆಯಲ್ಲಿ ಬೇಡಿ ಕೊಳ್ಳುತ್ತಾರೆ, ಸರ್ವ ಧರ್ಮಗಳ ಜನರು ಮಾತೆಯ ಆರ್ಶಿವಾದ ಪಡೆದುಕೊಂಡಿದ್ದಾರೆ. ಮೆರವಣಿಗೆ ಸಾಗುವ ದಾರಿಯುದ್ಧಕ್ಕೂ ಮೇಣದಬತ್ತಿಯನ್ನು ಹಿಡಿದುಕೊಂಡು ಮಾತೆಯ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮ ಕೇಂದ್ರದ ಗುರುಗಳಾದ ವಂದನಿಯ ಸ್ವಾಮಿ ಟೆನ್ನಿ ಕುರಿಯನ್ ಮತ್ತು ಇನ್ನಿತರ ಗುರುಗಳು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..