ಇಂಡಿ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೋಳೆಗಾಂವ ಗ್ರಾಮದ ಸಂಗನ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಕರವೇ ಅಧ್ಯಕ್ಷ ಶಿವಾನಂದ ಮಲಕಗೊಂಡ ಆರೋಪಿಸಿದ್ದಾರೆ.
ಇಂಡಿ: ಕೋರೊನಾದಿಂದ ವಿದ್ಯಾರ್ಥಿಗಳ ಶಿಕ್ಷಣ ಮರಿಚೀಕೆ ಆಗಿದೆ. ಆದ್ರೇ, ಸಂಗನ ಬಸವೇಶ್ವರ ಆಡಳಿತ ಮಂಡಳಿಯ ಸದಸ್ಯನಾದ ಕಾಂತಪ್ಪ ಕಪ್ಪೇನವರ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ. ಇದರ ಬಗ್ಗೆ ವಿಚಾರಿಸಲು ಮಂಡಳಿಯ ಸದಸ್ಯ ಕಾಂತಪ್ಪ ಬಳಿ ಹೋದರೆ ಸಂಘಟನೆಯವರಿಗೆ ಅವಾಚ್ಯ ಶಬ್ದ ಬಳಕೆ ಮಾಡಿ ನಿಂದಿಸಿದ್ದಾರೆ. ಇತಂಹ ಕಾಲೇಜಿನ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೋಡಬೇಕು. ಇಲ್ಲದೇ ಹೋದ್ರೇ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ನಡೆಸಲಾಗುವದು ಎಂದು ಹೇಳಿದ್ದಾರೆ.