ಇಂಡಿ : ಹಳ್ಳಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜರೋಷವಾಗಿ ನಡೆಯುತ್ತಿದೆ. ಅದು ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ, ಕಂಡರು ಕಾಣದಂತೆ ಮೌನವಾಗಿ ಕುಳುತ್ತಿದ್ದಾರೆ. ಈ ಕೂಡಲೇ ಎಚ್ಚತ್ತ್ ಕೊಂಡು ಅಕ್ರಮ ಮದ್ಯ ಕಡಿವಾಣ ಹಾಕಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಪದಾಧಿಕಾರಿಗಳು ಅಬಕಾರಿ ಸಿಪಿಐ ರಾಹುಲ್ ಅವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಶೋಕ ಜಾಧವ ರಾಷ್ಟ್ರ ಸಮಿತಿ ಮಾತಾನಾಡಿದ ಅವರು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಕ್ರಮ ಮದ್ಯದ ಹಾವಳಿಯಿಂದ ಬಡವರು ಬದುಕು ಬಿದಿಗೆ ಬರುತ್ತಿವೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಿರಾಣಿ ಅಂಗಡಿ ಮತ್ತು ಪಾನಶಾಪ್ ಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಕೂಲಿ ನಾಲಿ ಮಾಡಿ ಬದುಕುತ್ತಿರುವ ಹೆಣ್ಣು ಮಕ್ಕಳ ಜೀವನ ನಡೆಸುವುದು ಕಷ್ಟಕರವಾಗಿದೆ. ಬಹುತೇಕ ಗ್ರಾಮಣ ಭಾಗದಲ್ಲಿ ಕೂಲಿಕಾರ್ಮಿಕ ಮತ್ತು ರೈತ ಕುಟುಂಬಗಳು ಇರುತ್ತವೆ. ಅವರ ಜೀವನ ಅಪರೋಕ್ಷವಾಗಿ ಅಧಿಕಾರಿಗಳು ಹಾಳು ಮಾಡಿದಂತಾಗುತ್ತಿದೆ ಎಂದು ಗಂಭೀರವಾಗಿ ಆರೋಪ ಮಾಡಿದರು. ಇನ್ನೂ ಸಹಾಯ ಸಹಕಾರ ಬೇಕಿದ್ರೆ ಕರ್ನಾಟಕ ರಾಷ್ಟ್ರ ಸಮಿತಿ ಜೊತೆಯಲ್ಲಿ ನಿಲ್ಲುತ್ತದೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ರೆ ಪ್ರತಿಭಟನೆ, ಹೋರಾಟಕ್ಕೂ ಕೂಡಾ ಸಿದ್ದವಾಗಿದ್ದೆವೆ ಎಂದು ಎಚ್ಚರಿಕೆ ಮಾತು ಹೇಳಿದರು. ಆದಷ್ಟು ಬೇಗ ಶಿಸ್ತಿನ ಕ್ರಮಕ್ಕಾಗಿ ಕೆ ಆರ್ ಎಸ್ ಸಂಘಟನೆ ಆಗ್ರಹಿಸುತ್ತೆದೆ ಎಂದು ಹೇಳಿದರು.
ತಾಲ್ಲೂಕು ಅಧ್ಯಕ್ಷ ಗಣಪತಿ ರಾಠೋಡ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಕಾರ್ಯದರ್ಶಿ ಲಕ್ಷ್ಮಣ ಚಡಚಣ ಹಾಗೂ ಕೆ ಆರ್ ಎಸ್ ಪಕ್ಷದ ಸೈನಿಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.