ಇಂಡಿ: ತಾಲೂಕಿನ ಜೀವಂತ ದೇವರ ಗುಡಿಯಂತಿರುವ ನಾದ ಕೆಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರತಿ ವರ್ಷವೂ ಕೂಡ ವಿದ್ಯಾರ್ಥಿಗಳ ಸಾಧನೆ ಪ್ರಗತಿಯತ್ತ ಸಾಗುತ್ತಿರುವುದು ಒಂದು ಹೆಮ್ಮೆಯ ವಿಷಯ. ಅದೇ ರೀತಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿ.ಎಮ್. ಬಂಡಗರ ಇವರು ಶಾಲೆಯ ಹಾಗೂ ವಿದ್ಯಾರ್ಥಿಗಳ ಕುರಿತು ಈ ವರ್ಷ 2022 ರ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ನಮ್ಮ ನಾದ ಕೆಡಿ ಸರಕಾರಿ ಪ್ರೌಢ ಶಾಲೆ ಉತ್ತಮ ಫಲಿತಾಂಶ ದೊರೆತಿದ್ದು, 102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 54 ಗಂಡು ,48 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 100 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟಿನಲ್ಲಿ 98.03%( ಪ್ರತಿಶತ ) ಫಲಿತಾಂಶ ಶಾಲೆಯದಾಗಿದೆ. ತಾಲೂಕಿನ ಪ್ರತಿಶತ ಫಲಿತಾಂಶದಲ್ಲಿ ಹಾಗೂ ಜಿಲ್ಲೆಯ ಫಲಿತಾಂಶದಲ್ಲಿಯೂ ಹೆಚ್ಚಾಗಿದೆ. ಶಾಲೆ ಪ್ರಾರಂಭವಾದಾಗಿನಿಂದಲೂ ಈ ವರ್ಷ ಹೆಚ್ಚಿನ ಫಲಿತಾಂಶ ದೊರಕಿದ್ದು ಹೆಮ್ಮೆಯ ವಿಷಯವಾಗಿದೆ. ಆದರೂ 1.ಮದರಗೊಂಡ ಹೋರ್ತಿಕರ ಎಂಬ ವಿದ್ಯಾರ್ಥಿ 625 ಕ್ಕೆ 614 ಅಂಕ, 2 .ಸಾಕ್ಷಿ ಲಾವಟೆ ಎಂಬ ವಿದ್ಯಾರ್ಥಿನಿ 625 ಕ್ಕೆ 610 ಅಂಕ, 3.ರುಕ್ಸಾನಾ ಮುಲ್ಲಾ 625 ಕ್ಕೆ 604 ಅಂಕಗಳನ್ನು ಪಡೆದು ಶಾಲೆಯ ಕೀರ್ತಿ ಪತಾಕೆಗೆ ಹೆಸರುವಾಸಿಯಾಗಿದ್ದು ಹೆಮ್ಮೆಯ ವಿಷಯವಾಗಿದೆ. ಅಲ್ಲದೆ ಶಾಲೆಯ ಸಿಬ್ಬಂದಿಗಳು, sdmc ಸಮಿತಿ, ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆ ಪ್ರಗತಿಯತ್ತ ಸಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಎ.ಬಿ.ಗುಗದಡ್ಡಿ , ಎಂ.ವಾಯ್. ಬಿರಾದಾರ, ಎ .ಕೆ. ಅಳಗುಂಡಗಿ, ಎಮ್. ಆಯ್.ಮಕಾನದಾರ, ಆರ್.ಆರ್.ನಾಗಠಾಣ, ಎಸ್.ಎಲ್. ಬಡಿಗೇರ, ಎಸ್.ಎಸ್. ಹಚಡದ , ಎಸ್.ಎಮ್.ಬಿರಾದಾರ, ಎ.ವ್ಹಿ. ಹೊಸಮನಿ, ಆರ್.ಬಿ. ಬಿರಾದಾರ. ಎಸ್.ಪಿ. ಸಂದಿಮನಿ, ಎನ್.ಎಸ್. ಗೆರಡೆ, ಜಿ.ಎಸ್.ಮಿರ್ಜಿ ಇತರರು ಉಪಸ್ಥಿತರಿದ್ದರು.