ಇಂಡಿಯಲ್ಲಿ SSLC ಪರೀಕ್ಷೆಗೆ ಸಕಲ ಸಿದ್ದತೆ..ವಿಶೇಷ ಏನು ಗೊತ್ತಾ..! ಅಬೀದ್ ಗದ್ಯಾಳ
- ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ಕೊಠಡಿಗೆ ಸಿಸಿ ಕ್ಯಾಮೆರಾ
- ವೆಬ್ ಕಾಸ್ಟಿಂಗ ವ್ಯವಸ್ಥೆ
- ಪರೀಕ್ಷಾ ಕೇಂದ್ರದ ಸುತ್ತ 200ಮೀ ನಿಷೇಧ
- ಆರೋಗ್ಯ ಇಲಾಖೆ ದಾದಿಯರನ್ನು ನೇಮಕ
- ಪರೀಕ್ಷಾ ದಿನದಂದು ವಿದ್ಯುತ್ ನಿಲುಗಡೆ
- ಪರಿಕ್ಷಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ
- ಉಚಿತ ಬಸ್ ವ್ಯವಸ್ಥೆ
ಇಂಡಿ : ಎಸೆಸೆಲ್ಸಿ ಪರೀಕ್ಷೆ ಮಾ.25ರಿಂದ ಆರಂಭವಾಗ – ಲಿದ್ದು, ವಿದ್ಯಾರ್ಥಿ ಗಳಿಗೆ ಯಾವುದೇ ರೀತಿಯ ಸಮಸ್ಯೆ ಗಳಾಗದಂತೆ ಎಚ್ಚರಿಕೆ ವಹಿಸಲು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ತಿಳಿಸಿದರು.
ಗ್ರಾಮೀಣ ಮತ್ತು ನಗರ ಸೇರಿದಂತೆ ತಾಲ್ಲೂಕಿನ್ಯಾದಂತ ಪರೀಕ್ಷೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಶನಿವಾರ ದಿನವೇ ಪರೀಕ್ಷಾ ಕೇಂದ್ರಗಳ ಆವರಣ ಸ್ವಚ್ಚತೆಗೊಳಿಸಿ ಡೆಸ್ಕಗಳ ಮೇಲೆ ನಂಬರ್ ಬರೆಯಲಾಗಿದೆ. ಮಾರ್ಚ 25 ರಿಂದ ಏಪ್ರೀಲ್ 6 ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಜರುಗಲಿದ್ದು ಇಂಡಿ ತಾಲೂಕಿನಲ್ಲಿ 4668 ವಿದ್ಯಾರ್ಥಿಗಳು ನಗರದಲ್ಲಿ ಎಂಟು ಮತ್ತು ಗ್ರಾಮೀಣ ಪ್ರದೇಶದಲ್ಲಿ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಾರೆ. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಸೂಸುತ್ರವಾಗಿ ನಡೆಸಲು ಕಂದಾಯ ಉಪವಿಬಾಗಾಧಿಕಾರಿ, ತಹಸೀಲ್ದಾರ, ತಾಪಂ ಇಒ ಮಾರ್ಗದರ್ಶನದಲ್ಲಿ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪ್ರತಿ ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಕಾರ್ಯಗಳ ವೀಕ್ಷಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವೆಬ್ ಕಾಸ್ಟಿಂಗ ವ್ಯವಸ್ಥೆ ಮಾಡಲಾಗಿದೆ. ಕಂದಾಯ ಉಪವಿಭಾಗಾಧಿಕಾರಿಗಳ ನಿರ್ದೇಶನದ ಮೇರೆಗೆ ಗ್ರುಪ್ ಬಿ ವೃಂದದ ಅಧಿಕಾರಿಗಳನ್ನು ಸ್ಥಾನಿಕ ಜಾಗೃತದಳದ ಅಧಿಕಾರಿಗಳನ್ನಾಗಿ ಕಂದಾಯ ಉಪ ವಿಭಾಗಾಧಿಕಾರಿ – ಗಳು ನೇಮಕ ಮಾಡಿ ಆದೇಶಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ 200ಮೀ ಅಂತರದಲ್ಲಿನ ಝೆರಾಕ್ಸ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆ ದಾದಿಯರನ್ನು ನೇಮಕ ಮಾಡಿದೆ. ಪರೀಕ್ಷಾ ದಿನದಂದು ವಿದ್ಯುತ್ ನಿಲುಗಡೆ ಯಾಗದಂತೆ ಮುಂಜಾಗೃತೆ ವಹಿಸಲು ಹೆಸ್ಕಾಂ ಗೆ ಎಸಿ ಸೂಚಿಸಿದ್ದಾರೆ. ಸರಕಾರಿ ಮತ್ತು ಅನುದಾನಿತ ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾನ್ಹ ಉಪಹಾರ ಯೋಜನೆಯಡಿ ಪರಿಕ್ಷಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯ ಪ್ರಯಾಣಿಸುವ ಮಕ್ಕಳಿಗೆ ತೊಂದರೆ ಯಾಗದಂತೆ ಬಣ್ಣದ ಹಬ್ಬ ಆಚರಿಸಲು ತಿಳಿಸಲಾಗಿದೆ. ಗ್ರಾಮೀಣ ಪ್ರದೇಶ ಮತ್ತು ಇತರೆ ಮಕ್ಕಳ ಪ್ರವೇಶ ಪತ್ರ ತೋರಿಸಿ ಉಚಿತ ಪ್ರಯಾಣ ಮಾಡಲು ಪ್ರಕಟಣೆಯಲ್ಲಿ ಎಸಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
ಇಂಡಿ ಪಟ್ಟಣದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ನಡೆದ ಸಭೆಯಲ್ಲಿ ಎಸಿ ಅಬೀದ್ ಗದ್ಯಾಳ ಮತ್ತು ತಾಲೂಕಿನ ಅಧಿಕಾರಿಗಳು ಪಾಲ್ಗೊಂಡಿದ್ದರು.