ಹುಲ್ಲೂರ ಎಸ್ ಎನ್ ಡಿ ನ್ಯಾಷನಲ್ ಸ್ಕೂಲ್ ನಲ್ಲಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿಗೆ ಚಾಲನೆ.
ಕೊಕ್ಕೋ ಮತ್ತು ಕಬಡ್ಡಿ ನಮ್ಮ ಗ್ರಾಮೀಣ ಕ್ರೀಡೆಗಳು. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಆರೋಗ್ಯ ವೃದ್ಧಿಯಾಗುತ್ತದೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ,ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಧಿಕಾರಿ ಕಾರ್ಯಾಲಯ ಮುದ್ದೇಬಿಹಾಳ ಸಮೂಹ ಸಂಪನ್ಮೂಲ ಕೇಂದ್ರ ಹುಲ್ಲೂರ ಎಸ್ ಎನ್ ಡಿ ನ್ಯಾಷನಲ್ ಸ್ಕೂಲ್ ನಲ್ಲಿ 2025_26 ನೇ ಸಾಲಿನ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸಿಸುವುದರ ಮೂಲಕ ಚಾಲನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್ ಸಾವಳಗಿ ನೀಡಿ ಅವರು
ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಕ್ರೀಡೆಯು ಮುಖ್ಯ ಉತ್ತಮ ದೇಹದಲ್ಲಿ ಉತ್ತಮ ಆತ್ಮ ಇರುತ್ತದೆ ಎಂದರು.
ನಿವೃತ್ತ ಪ್ರವಾಸೋದ್ಯಮ ಉಪ ನಿರ್ದೇಶಕ ಎಂ ಜಿ ಖ್ಯಾತನವರ ಮಾತನಾಡಿ ಕೊಕ್ಕೋ ಮತ್ತು ಕಬಡ್ಡಿ ನಮ್ಮ ಗ್ರಾಮೀಣ ಕ್ರೀಡೆಗಳು. ಈ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಆರೋಗ್ಯ ವೃದ್ಧಿಯಾಗುತ್ತದೆ. ದೇಹವು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯು ಬೇಕಿದೆ’ ಎಂದರು.
ದಿವ್ಯ ಸಾನಿದ್ಯ ಯರಝರಿ ಯಲ್ಲಾಲಿಂಗಮಠದ ಶ್ರೀ ಮಲ್ಲಾರಲಿಂಗ ಮಹಾಸ್ವಾಮಿಗಳು ಮಾತನಾಡಿ ಕ್ರೀಡೆ ವಿದ್ಯಾರ್ಥಿಗಳ ಅವಿಭಾಜ್ಯ ಅಂಗ ಎಲ್ಲಾ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಬೇಕು ಕ್ರೀಡೆಯಿಂದ ಶಿಸ್ತು ಮತ್ತು ಬದ್ದತೆ ಬರುತ್ತದೆ ಎಂದರು.
ಕ್ರೀಡಾ ಧ್ವಜಾರೋಹಣ ಹುಲ್ಲೂರ ಗ್ರಾಪಂ ಅಧ್ಯಕ್ಷೆ ನಯನ ಜಿ ಚವ್ಹಾಣ ಮಾಡಿದರು ಕ್ರೀಡಾ ಪ್ರತಿಜ್ಞೆಯನ್ನು ದೈಹಿಕ ಶಿಕ್ಷಣಾಧಿಕಾರಿ ಕವಡಿ ಭೋದಿಸಿದರು, ದೀಪಾ ಮತ್ತು ಸಂಗಡಿಗ ವಿದ್ಯಾರ್ಥಿಗಳು ಸ್ವಾಗತಿಸಿದರು ಎಸ್ ಎನ್ ಡಿ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ ಎಂ.ಎಸ್ ಕೊಪ್ಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ, ಅಕ್ಷರ ದಾಸೋಹ ಸಂಯೋಜಕಧಿಕಾರಿ ಎಂ ಎಂ ಬೆಳಗಲ್, ದೈಹಿಕ ಶಿಕ್ಷಣಾಧಿಕಾರಿ ಬಿ ವೈ ಕವಡಿ,ಮಾಜಿ ತಾಪಂ ಅಧ್ಯಕ್ಷ ಮುತ್ತಣ್ಣ ಹುಗ್ಗಿ ಸುರೇಶ ಹಳೆಮನಿ, ಪಿಡಿಒ ಎ.ಎಸ್ ಲೋನಾರಮಠ, ನೋಡಲ್ ಅಧಿಕಾರಿ ಎಂ ಕೆ ಬಾಗವಾನ, ಸಿ ಆರ್ ಪಿ ಗುಂಡು ಚವ್ಹಾಣ ,ಬಸವರಾಜ ಕೊಪ್ಪ, ನಿಂಗಪ್ಪ ಓಲೇಕಾರ, ಜೆ ಎಂ ಕುಂದರಗಿ ಮಹಾದೇವಪ್ಪ ಚೆನ್ನಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.