ವಿಜಯಪುರ: ಯಾವ್ ಗನ್ ಇಟ್ಟೀಯಾ.. ಮತ್ಯಾಕೇ ತಂದೀಯಾ ಗನ್.. ಗನ್ ಸಪ್ಲೈ ಮಾಡ್ತೀಯಾ.. ಈ ಮಾತು ವಿಜಯಪುರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಚ್‌ಡಿ ಆನಂದಕುಮಾರ ಮಾತುಗಳು. ಹೌದು. ವಿಜಯಪುರ ನಗರದ ಪೊಲೀಸ ಮೈದಾನದಲ್ಲಿ ರೌಡಿಶೀಟರ್‌ಗಳಿಗೆ ಪೊಲೀಸ ಪರೇಡ್ ನಡೆಸಿ, ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ಎಸ್ಪಿ ಎಚ್‌ಡಿ ಆನಂದಕುಮಾರ ನೇತೃತ್ವದಲ್ಲಿ ಪೊಲೀಸ ಪರೇಡ್ ಮಾಡಲಾಯಿತು. ಅಲ್ಲದೇ, ರೌಡಿಶೀಟರ್‌ಗಳು ಬಾಳ್ ಬಿಚ್ಚಿದ್ರೇ ನಿಮಗ್ ಬ್ಯಾರೆನೇ ವ್ಯವಸ್ಥೆ ಮಾಡಬೇಕು ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆಯಲ್ಲಿ ಹಿರಿಯ, ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.