VOJ Desk: ರಾಜ್ಯದಲ್ಲಿ ನೂತನ ಕಾಂಗ್ರೆಸ್ಸರ್ಕಾರ ಅಧಿಕಾರಕ್ಕೆ ಬಂದಿದೆ ಸಿಎಂ ಕುರ್ಚಿಗಾಗಿ ಕಳೆದಎರಡು ಮೂರು ದಿನಗಳಿಂದ ಹಗ್ಗ ಜಗ್ಗಾಟ ನಡೆದಿದೆ. ಇದೇ ವಿಚಾರಕ್ಕೆ ಇದೀಗ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಶಾಕ್ ನೀಡಿದೆ. ಸಿದ್ದರಾಮಯ್ಯ 2, ಡಿಕೆಶಿ 3 ವರ್ಷ ಸಿಎಂ? : ಇಬ್ಬರು ನಾಯಕರು ಸಿಎಂ ಆಗಲು ಪೈಪೋಟಿ ನಡೆಸಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಲು ಮುಂದಾಗಿದೆ. ಇದರ ಜೊತೆಗೆ ಹೊಸ ಸೂತ್ರವನ್ನು ಹೆಣೆದಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣಾ ದೃಷ್ಟಿಯಿಂದ ಸಿದ್ದರಾಮಯ್ಯ
ಕೇವಲ ಎರಡು ವರ್ಷ ಮಾತ್ರ ಮುಖ್ಯಮಂತ್ರಿ ಆಗಿರಲಿದ್ದಾರೆ. ಇನ್ನೂಳಿದ ಮೂರು ವರ್ಷ ಡಿ ಕೆ ಶಿವಕುಮಾರ್ ಸಿಎಂ ಹುದ್ದೆ ಅಲಂಕರಿಸಲಿದ್ದಾರೆ. ಗೊಂದಲದ ವಾತಾವರಣ ಬೇಗ ನಿವಾರಣೆ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ನಾಯಕರ ಮುಂದೆ ಪ್ರಸ್ತಾಪಿಸಿ ಸಮಾಲೋಚನೆ
ಮಾಡಿದ್ದಾರೆ. ಅವರ ಈ ಸೂತ್ರಕ್ಕೆ ಸಿದ್ದು ಹಾಗೂ ಡಿಕೆಶಿ
ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದ್ದು, 5 ವರ್ಷ
ನಾನೇ ಸಿಎಂ ಅಂದುಕೊಂಡಿದ್ದ ಸಿದ್ದರಾಮಯ್ಯಗೆ
ಹೈಕಮಾಂಡ್ ಶಾಕ್ ಕೊಟ್ಟಿದೆ.