ಅ – 11 ಕ್ಕೆ ಶೌರ್ಯ ಜಾಗರಣ ರಥಯಾತ್ರೆ ಇಂಡಿಗೆ ಆಗಮನ..
ಇಂಡಿ : ನಮ್ಮ ಸನಾತನ ಧರ್ಮ ಮತ್ತು ಪೂರ್ವಜರ ಬಗ್ಗೆ ನೈಜ ಅರಿವನ್ನು ಮೂಡಿಸುವ ಸಲುವಾಗಿ ಶೌರ್ಯ ಜಾಗರಣ ರಥಯಾತ್ರೆ ಅಕ್ಟೋಬರ್ 11 ಕ್ಕೆ ತಾಲೂಕಿನ ನಾದ ಗ್ರಾಮಕ್ಕೆ ಪ್ರವೇಶ ಮಾಡುವ ಮೂಲಕ ಬರಮಾಡಿ ಕೊಳ್ಳಲಾಗುವುದು. ತದನಂತರ ಸಾರ್ವಜನಿಕ ಬಹಿರಂಗ ಸಭೆ ಇಂಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದೆ ಎಂದು ಭಜರಂಗದಳ ಪ್ರಾಂತ್ ಮುಖಂಡ ಶ್ರೀಮಂತ ದುದಗಿ,
ಹೇಳಿದರು.
ಗುರುವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಸಭಾಭವನದಲ್ಲಿ ಕರೆದ ಸುದ್ದಿ ಘೊಷ್ಠಿಯಲ್ಲಿ ಮಾತಾನಾಡಿ ಹೇಳಿದರು. ಈ ರಥ ಯಾತ್ರೆಯೂ ಸ- 30 ರಂದು ಪ್ರಾರಂಭಗೊಳಿಸಿ ಕರ್ನಾಟಕದ ಉತ್ತರ ಪ್ರಾಂತದಲ್ಲಿ ಏಳು ರಥಗಳಾಗಿ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳ ಮೂಲಕ ಹಾದುಹೋಗುವಂತೆ ಆಯೋಜಿಸಲಾಗಿದೆ. ಇನ್ನೂ ಕಲ್ಬುರ್ಗಿ, ಮಾನವಿ, ಶಿರಸಿ, ವಿಜಯಪುರ, ಬೆಳಗಾವಿ, ಮತ್ತು ಹುಬ್ಬಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ರಥಯಾತ್ರೆಯು ಸಂಪನ್ನಗೊಳ್ಳಲಿದೆ. ಅದಲ್ಲದೇ ರಥಯಾತ್ರೆಯ ಅನೇಕ ಪ್ರಮುಖ ಕೇಂದ್ರಗಳಲ್ಲಿ ಏರ್ಪಡಿಸಿರುವ ಸಭೆಗಳಲ್ಲಿ ರಾಜ್ಯ ಮತ್ತು ಕೇಂದ್ರದ ಪದಾಧಿಕಾರಿಗಳು ರಥಯಾತ್ರೆಯ ಸಂದೇಶಗಳನ್ನು ನೀಡಲಿದ್ದಾರೆ ಎಂದು ಹೇಳಿದರು. ಅದರಂತೆ ಪಟ್ಟಣದಲ್ಲಿ ಸಾಯಂಕಾಲ 4 ಘಂಟೆಗೆ ಮಾಹಾವೀರ ವೃತದ ಹತ್ತೀರ ಆಂಜನೆ ದೇವಸ್ಥಾನದ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ, ಪ್ರಕಾಶ್ ಬಿರಾದಾರ, ನ್ಯಾಯಾವಾದಿ ಮಲ್ಲಿಕಾರ್ಜುನ ಬಿರಾದಾರ, ನೇತಾಜಿ ಪವಾರ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.