ಇಂಡಿ : ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗೊಬ್ಬರ ಅಂಗಡಿಯಲ್ಲಿನ ಗೊಬ್ಬರ ಚೀಲಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ರಸ್ತೆಯಲ್ಲಿ ನಡೆದಿದೆ. ನಂದಿ ಅಗ್ರೊ ಟ್ರೆಡರ್ಸ್‌ನ್ ರಾಘು ಧನಶೆಟ್ಟಿ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಬೆಂಕಿಗಾಹುತಿಯಿಂದಾಗಿ ಸುಮಾರು 30 ಲಕ್ಷ ಮೌಲ್ಯದ ಗೊಬ್ಬರ ಹಾನಿಯಾಗಿದೆ. ಮಾಹಿತಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಭೇಟಿ ನೀಡಿ ಬೆಂಕಿ ನಂದಿಸಿದರು. ಈ ಘಟನೆ ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.