ಅಫಜಲಪುರ: ಅಫಜಪುರ ಕಸಾಪ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕವನ್ನು ಜಿಲ್ಲಾಧ್ಯಕ್ಷರ ನಿರ್ದೇಶನದ ಮೇರೆಗೆ ಇಂದು ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಅದ್ಯಕ್ಷ ಪ್ರಭು ಫುಲಾರಿ ತಿಳಿಸಿದರು.
ಅಫಜಲಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಸಕ್ರೀಯವಾಗಿ ನಡೆಯಲು ನೂತನ ಕಸಾಪ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಗೌರವ ಕಾರ್ಯದರ್ಶಿಯಾಗಿ ಪರಮಾನಂದ ಸರಸಂಬಿ, ಡಾ. ಸಂಗಣ್ಣ ಎಂ ಸಿಂಗೆ ಹಾಗೂ ಗೌರವ ಕೋಶಾದ್ಯಕ್ಷರಾಗಿ ಬಸಪ್ಪ ಜಾಬಾ, ಗೌರವಾಧ್ಯಕ್ಷರಾಗಿ ಬಸಣ್ಣ ಗುಣಾರಿ, ಸಂಘ ಸಂಸ್ಥೆ ಪ್ರತಿನಿಧಿಯಾಗಿ ಶ್ರೀಶೈಲ್ ಮ್ಯಾಳೇಶಿ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಗೋಪಾಲ ಹಳ್ಯಾಳ, ಅರುಣಕುಮಾರ ರಾಠೋಡ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ರೂಪಾ ಸಾಲೋಟಗಿ, ಮಹಿಳಾ ಪ್ರತಿನಿಧಿಯಾಗಿ ಮಹಾನಂದಾ ನೂಲಾ, ಪ್ರೇಮಾವತಿ ರಾಜನವರ, ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ ಕಲ್ಲೂರ, ಕಾಲೇಸಾಬ ಬಾಗವಾನ, ಈರಣ್ಣ ಮಗಿ ಅವರನ್ನು ಸೇರಿದಂತೆ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ ಎಂದರು.