ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಒಂದು ಎತ್ತಿನ ಸಾಟಾ ಜಗ್ಗಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ದೆಯಲ್ಲಿ ಸಿದ್ದಾರಾಮ ನಾಯಕೋಡಿ ಅವರ ಎತ್ತು ಕೇವಲ ಎರಡು ನಿಮಿಷದಲ್ಲಿ 10 ಕ್ವಿಂಟಾಲ್ ಭಾರ ಹೊತ್ತುಕೊಂಡು 208 ಫೀಟ್ ದೂರದವರೆಗೆ ಕ್ರಮಿಸಿ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ. ಸಿದ್ದಪ್ಪ ನಾಯಕೋಡಿ ಅವರ ಎತ್ತು ಸತತವಾಗಿ ಮೂರು ವರ್ಷ ಒಂದು ಎತ್ತಿನ ಸಾಟಾ ಜಗ್ಗಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿ ದಾಖಲೆ ಬರೆದಿದೆ.
ಸ್ಪರ್ಧೆಯಲ್ಲಿ ಚಂದಪ್ಪ ಸಿದ್ರಾಮಪ್ಪ ವಾಯಿ ಅವರ ಎತ್ತು ಎರಡು ನಿಮಿಷದಲ್ಲಿ 10 ಕ್ವಿಂಟಾಲ್ ಭಾರ ಹೊತ್ತುಕೊಂಡು 102 ಫೂಟ್ ದೂರದವರೆಗೆ ಕ್ರಮಿಸಿ ದ್ವಿತೀಯ ಸ್ಥಾನ ಪಡೆದಿದೆ. ಉಪ್ಪಾರವಾಡಿ ಗ್ರಾಮದ, ಶಾಮರಾಯ ಗಾರಗುಂಡೆ ಅವರ ಎತ್ತು ಎರಡು ನಿಮಿಷದಲ್ಲಿ 10 ಕ್ವಿಂಟಾಲ್ ಭಾರ ಹೊತ್ತುಕೊಂಡು 99 ಫೂಟ್ ದೂರ ಕ್ರಮಿಸಿ ತೃತೀಯ ಸ್ಥಾನ ಪಡೆದುಕೊಂಡಿದೆ. ಮಣ್ಣೂರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ ಧೂಳಪ್ಪ ಬಾಕೆ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾ,ಪಂ, ಉಪಾಧ್ಯಕ್ಷ ಬಿ,ರಾಜು, ಬೆನಕನಹಳ್ಳಿ, ನಾಗೇಶ ದೇವಕತೆ ಪಿ,ಎಲ್,ಡಿ, ಬ್ಯಾಂಕ್ ಅಧ್ಯಕ್ಷ ಪುಂಡಲೀಕ,ಕಟ್ಟಿ,ಗ್ರಾ,ಪಂ ಸದಸ್ಯ ಬಸವರಾಜ, ವಾಯಿ,ವಿ,ಎಸ್ ಎಸ್, ಎನ್ ಅಧ್ಯಕ್ಷ ಮಹಾಂತೇಶ ಕರೂಟಿ ಉಪಾಧ್ಯಕ್ಷ, ಚಂದು ಹಿರೇಕುರುಬರ, ಬಸಣ್ಣ ಜಕಾಪೂರ ಶಿವಪ್ಪ ಕರೂಟಿ, ಮಾಳಪ್ಪ ಪೂಜಾರಿ,ಪ್ರಭುಲಿಂಗ ಕೊಟ್ನಾಳ, ಯಲ್ಲಪ್ಪ ನಾಯಕೋಡಿ ಚಂದಪ್ಪ ವಾಯಿ ಶಾಂತಪ್ಪ ವಾಯಿ, ಮಾಣಿಕ ಮಾಸ್ತರ ಬಂಡಗಾರ ಮಲಕು ಮಾರಾಯ ಪೂಜಾರಿ, ಸಿದ್ದಪ್ಪ ನಾಯಕೋಡಿ, ಅಪ್ಪಾಸಾಬ ಹೊಸೂರಕರ, ಯಶ್ವಂತ, ಕರೂಟಿ, ಮಲಕಣ್ಣ ಹೊಸೂರಕರ, ಸಂತೋಷ ಅಲ್ಲಾಪೂರ, ಸಿದ್ದಾರಾಮ ಬದನಿಕಾಯಿ, ಶಾವರಸಿದ್ದ ಜಮಾದಾರ ಜಗದೀಶ ಬೇನೂರ ಯಲ್ಲಾಲಿಂಗ ವಾಯಿ, ಹುಸೇನಬಾಷಾಾ
ಬಡೆಘರ, ಕುಪೇಂದ್ರ ಜಮಾದಾರ, ಗೌಡಪ್ಪ ಚಿಕ್ಕಮಣೂರ ಸೇರಿದಂತೆ ಮಣ್ಣೂರ, ಶೇಷಗಿರಿ ಹೊಸೂರ ರಾಮನಗರ
ಕುಡಗನೂರ, ಶಿವಬಾಳನಗರ, ಉಪ್ಪಾರವಾಡಿ ಗ್ರಾಮಸ್ಥರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.