ಬೆಂಗಳೂರು : ದ್ವೀತಿಯ ಪಿಯುಸಿ ಅನುತ್ತೀರ್ಣ ವಿಧ್ಯಾರ್ಥಿಗಳಿಗೆ ಎರಡನೇ ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ಮೊದಲು ಪೂರಕ ಪರೀಕ್ಷೆ ಮುಗುದಿರುವದರಿಂದ ಈಗ ಎರಡನೇ ಪೂರಕ ಪರೀಕ್ಷೆಗೆ ಶುಕ್ರವಾರ ವೇಳಾಪಟ್ಟಿ ಪ್ರಕಟಿಸಿದೆ. ಶಿಕ್ಷಣ ಇಲಾಖೆಯು ಅನುತ್ತೀರ್ಣಗೊಂಡ ವಿಧ್ಯಾರ್ಥಿಗಳಿಗೊಸ್ಕರ ಪ್ರತಿ ವರ್ಷ ಎರಡು ಬಾರಿ ನಡೆಸಲು ಪೂರಕ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ವಿಧ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸಹಾಯವಾಗಲಿದೆ. ಆದರೆ ಈ ಪೂರಕ ಪರೀಕ್ಷೆಗೆ ಉಪನ್ಯಾಸಕರ ವಿರೋದವಿತ್ತು. ಆದರೂ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅಗಸ್ಟ 21 ರಿಂದ ಸಪ್ಟೆಂಬರ್ 2 ಪೂರಕ ಪರೀಕ್ಷೆ -2 ನಡೆಸಲು ನಿರ್ಧರಿಸಿದೆ. ಬಹುತೇಕ ಎಲ್ಲಾ ಪರೀಕ್ಷೆಗಳು ಮಧ್ಯಾಹ್ನ 2:15 ರಿಂದ 5:30 ರ ವರೆಗೆ ನಡೆಯಲಿದೆ.
2022-23 ನೇ ಸಾಲಿನ ಹಾಗೂ ಅದಕ್ಕೂ ಹಿಂದಿನ ವರ್ಷಗಳಲ್ಲಿ ಅನುತ್ತೀರ್ಣವಾಗಿರುವ ದ್ವೀತಿಯ ಪಿಯುಸಿ ವಿಧ್ಯಾರ್ಥಿಗಳು ನೊಂದಾಯಿಸಿಕೊಂಡು ಪರೀಕ್ಷೆ ಬರೆಯಬಹುದು. ಇನ್ನೂ ನೊಂದಣಿ ಗೆ ಅಗಸ್ಟ್ 10 ಕೊನೆಯ ದಿನವಾಗಿರುತ್ತೆದೆ. ಆಸಕ್ತರು ತಮ್ಮ ಕಾಲೇಜುಗಳಿಗೆ ತೆರಳಿ ನೊಂದಣಿ ಮಾಡಿಕೊಳ್ಳಬಹುದು. ಪರೀಕ್ಷಾ ಶುಲ್ಕವನ್ನು ಗ್ರಾಮ್ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಪಾವತಿಸಬಹುದು. ಕಾಲೇಜು ಸಿಬ್ಬಂದಿ ಆಯಾ ಕಾಲೇಜಿನ ಲಾಗಿನ್ ಮೂಲಕ ಆನಲೈನಲ್ಲಿ ವಿಧ್ಯಾರ್ಥಿಗಳ ನೋಂದಣಿ ಮಾಡಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವೇಳಾಪಟ್ಟಿ
August 21 – ಕನ್ನಡ, ಅರೆಬಿಕ್,
August 22 – ಐಚ್ಛಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ ಗಣಿತ,
August 23 – ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಿತ ವಿಜ್ಞಾನ
August 24 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಹಿಂದೂಸ್ತಾನಿ ಸಂಗೀತ
August 25 – ಇತಿಹಾಸ, ಸಂಖ್ಯಾಶಾಸ್ತ್ರ
August 26 – ಇಂಗ್ಲೀಷ್
August 28 – ಭೌತಶಾಸ್ತ್ರ, ಭೂಗೋಳ ಶಾಸ್ತ್ರ, ಮನಃಶಾಸ್ತ್ರ
August 29 – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣಶಾಸ್ತ್ರ, ಗೃಹ ವಿಜ್ಞಾನ
August 30 – ರಾಜ್ಯಶಾಸ್ತ್ರ, ಗಣಿತಶಾಸ್ತ್ರ
August 31 – ಹಿಂದಿ
September 1 – ಅರ್ಥಶಾಸ್ತ್ರ, ಜೀವಶಾಸ್ತ್ರ
September 2 – ತಮಿಳು, ತೆಲುಗು, ಮಲಯಾಳಂ, ಮಾರಾಠಿ, ಉರ್ದು, ಸಂಸ್ಕೃತ, ಫ್ರೆಂಚ್.