ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲು ಒಕ್ಕೂಟದ ಸಂಚಾಲಕರ ಕರೆ:
ಸಿಂಧನೂರು: ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಹಿಂದುಳಿದ, ಅಲ್ಪಸಂಖ್ಯಾತ, ಪ್ರಗತಿಪರರ ಒಕ್ಕೂಟದಿಂದ ಹಮ್ಮಿಕೊಂಡಿರುವ ಬಹುತ್ವ ಭಾರತೀಯರ ಭಾವೈಕ್ಯತಾ ಸಮಾವೇಶದ ಕರಪತ್ರ ಹಾಗೂ ಭಿತ್ತಿಪತ್ರವನ್ನು ಒಕ್ಕೂಟದ ಪ್ರಧಾನ ಸಂಚಾಲಕರು ಹಾಗೂ ಸಂಚಾಲಕರ ಮಂಡಳಿ ಬಿಡುಗಡೆಗೊಳಿಸಿ ಒಕ್ಕೂಟದ ಸಂಚಾಲಕರಾದ ಡಿ.ಹೆಚ್. ಕಂಬಳಿ, ಜಿಲಾನಿಪಾಷಾ, ಖಾದರ ಸುಭಾನಿ, ಡಿ.ಹೆಚ್. ಪೂಜಾರ, ಎಂ.ಡಿ. ನದೀಮುಲ್ಲಾ, ಹನುಮಂತ ಗೋಮರ್ಸಿ, ನೀರುಪಾದೆಪ್ಪ ಗುಡಿಹಾಳ, ಎಂ.ಗಂಗಾಧರ, ದುರುಗಪ್ಪ ರೌಡಕುಂದ, ಗುಡದೇಶ ಭರ‍್ಗಿ ಹಾಗೂ ಹೆಚ್.ಎನ್. ಬಡಿಗೇರ ಸೇರಿದಂತೆ ಇತರೆ ಪ್ರಧಾನ ಸಂಚಾಲಕರು ಮತ್ತು ಸಂಚಾಲಕರು ಮಾತನಾಡಿ, ಕೋಮುವಾದಿ ಶಕ್ತಿಗಳು ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಪ್ರಜಾಪ್ರಭುತ್ವ ಜಾಗದಲ್ಲಿ ಬ್ರಾಹ್ಮಣವಾದಿ ಪ್ಯಾಸಿಸ್ಟ್ ಆಡಳಿತಕ್ಕೆ ಮುಂದಾಗಿ ಯುವ ಸಮೂಹದಲ್ಲಿ ಮತೀಯವಾದದ ವಿಷ ಬೀಜವನ್ನು ಬಿತ್ತಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೋಮು ಸಾಮರಸ್ಯ ಹದಗೆಡಿಸುತ್ತಿದ್ದಾರೆ.
ಹಾಗಾಗಿ ಕೋಮು ಸೌಹಾರ್ದತೆ, ಸ್ವಾತಂತ್ರ್ಯ ಮತ್ತು ಸಮಾನತೆ-ಸಹಬಾಳ್ವೆ ಪ್ರೀತಿಸುವ ಎಲ್ಲರನ್ನು ಒಗ್ಗೂಡಿಸಲು ಬಹುತ್ವ ಭಾರತ-ಎಲ್ಲರ ಭಾರತ ಕಟ್ಟುವ ಮನಸುಳ್ಳ ಎಲ್ಲಾ ಪಕ್ಷ, ಸಂಘಟನೆಗಳ ಬೇದ ಬಿಟ್ಟು ಸ್ವಯಂ ಪ್ರೇರಿತವಾಗಿ ಸಮಾವೇಶದಲ್ಲಿ ನದಿಗಳಂತೆ ಹರಿದು ಬಂದು ಸಮುದ್ರದಂತೆ ಸೇರಿ ಇಡೀ ರಾಷ್ಟ್ರಕ್ಕೆ ಭಾವೈಕ್ಯತೆಯ ಸಂದೇಶ ಸಾರುವುದಕ್ಕಾಗಿ ಪ್ರತಿಯೊಬ್ಬರು ಬಹುತ್ವ ಭಾರತ ಭಾವೈಕ್ಯತಾ ಸಮಾವೇಶದಲ್ಲಿ ಭಾಗವಹಿಸಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಸೇನಸಾಬ, ಪೂಜಪ್ಪ ಪೂಜಾರಿ, ಶಬ್ಬೀರ್, ಬಿ.ಲಿಂಗಪ್ಪ, ನರಸಪ್ಪ ಕಟ್ಟಿಮನಿ, ದೌಲಸಾಬ ದೊಡ್ಡಮನಿ, ಯಲ್ಲಪ್ಪ ಗೋಮರ್ಸಿ, ಎಂ.ಎಸ್. ರಾಜಶೆಖರ್, ನೀರುಪಾದಿ ಸಾಸಲಮರಿ, ಶರಣು ಮಲ್ಲಾಪೂರ, ರಮೇಶ ಭರ‍್ಗಿ ಸೇರಿಂದತೆ ಅನೇಕರು ಭಾಗವಹಿಸಿದ್ದರು.