ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ
ಇಂಡಿ : ಮತಕ್ಷೇತ್ರ ೧೯೫೭ ರಿಂದ ಆಗಿದ್ದು ೧೯೫೭, ೬೨, ೬೭, ೭೨, ೭೮, ೮೩, ೮೫, ೮೯, ೧೯೯೪, ೯೯ , ೨೦೦೪, ೦೮, ೧೩, ೧೮ ಮತ್ತು ೨೩ ಒಟ್ಟು ಹದಿನೈದು ಬಾರಿ ವಿಧಾನಸಭೆಗೆ ಚುನಾವಣೆ ನಡೆದಿವೆ. ಏಳು ಮಂದಿ ಶಾಸಕರು ಆಯ್ಕೆ ಯಾಗಿದ್ದಾರೆ. ಇದರಲ್ಲಿ ಮಲ್ಲಪ್ಪಾ ಕರಬಸಪ್ಪ ಸುರಪುರ, ಆರ್,ಆರ್ ಕಲ್ಲೂರ ರವಿಕಾಂತ ಪಾಟೀಲ ಮತ್ತು ಯಶವಂತರಾಯಗೌಡ ಪಾಟೀಲರು ಮೂರು ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆದರೆ ಇರ‍್ಯಾರು ಮಂತ್ರಿ ಆಗಿಲ್ಲ. ಚಾಂದಕವಟೆಯ ಗವಿಸಿದ್ದಪ್ಪಗೌಡ ಪಾಟೀಲ, ಎನ್.ಎಸ್.ಖೇಡ, ಡಾ|| ಸಾರ್ವಭೌಮ ಬಗಲಿ ಇವರು ಒಂದು ಬಾರಿ ವಿಧಾನಸಭೆಗೆ ಆಯ್ಕೆ ಯಾಗಿದ್ದಾರೆ. ಇರ‍್ಯಾರು ಮಂತ್ರಿ ಆಗಿಲ್ಲ.
ಜಿಲ್ಲೆಯ ಬಳ್ಳೊಳ್ಳಿಯಿಂದ ರಮೇಶ ಜಿಗಜಿಣಗಿ, ಸಿಂದಗಿಯಿAದ ಎಂ.ಸಿ.ಮನಗೂಳಿ, ಆರ್.ಬಿ.ಚೌಧರಿ, ವಿಜಯಪುರಿಂದ ಎಂ.ಎಲ್. ಉಸ್ತಾದ, ತಿಕೋಟಾದಿಂದ ಬಿ.ಎಂ.ಪಾಟೀಲ, ಎಂ.ಬಿಪಾಟೀಲ, ಬಸವನಬಾಗೇವಾಡಿಯಿಂದ ಬಿ,ಎಸ್.ಪಾಟೀಲ ಸಾಸನೂರ, ಬಿ.ಎಸ್.ಪಾಟೀಲ ಮನಗೂಳಿ ಶಿವಾನಂದ ಪಾಟೀಲ, ಮುದ್ದೇಬಿಹಾಳದಿಂದ ಜೆ.ಎಸ್.ದೇಶಮುಖ , ಹೂವಿನ ಹಿಪ್ಪರಗಿಯಿಂದ ಶಿವಪುತ್ರಪ್ಪ ದೇಸಾಯಿ ಸೇರಿದಂತೆ ಜಿಲ್ಲೆ ಎಲ್ಲ ಏಳು ಮತ್ತು ರಾಜ್ಯದ ೨೨೪ ಮತಕ್ಷೇತ್ರಗಳಲ್ಲಿ ೨೨೩ ರಲ್ಲಿ ಮತಕ್ಷೇತ್ರದಿಂದ ಮಂತ್ರಿಯಾಗಿದ್ದಾರೆ. ಆದರೆ ಇಂಡಿ ಮತಕ್ಷೇತ್ರದಿಂದ ಮಾತ್ರ ಯಾರೂ ಮಂತ್ರಿಯಾಗಿಲ್ಲ. ಸಿದ್ದರಾಮಯ್ಯನವರು ರಾಜಿನಾಮೆ ನೀಡಿದ್ದು ಬರುವ ಮಂತ್ರಿಮAಡಳದಲ್ಲಿ ಯಶವಂತರಾಯಗೌಡರಿಗೆ ಮಂತ್ರಿಗಿರಿ ದೊರತಿತೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.
೧೯೫೭ ರಲ್ಲಿ ಸುರಪುರ ಮಲ್ಲಪ್ಪನವರು ನಿಜಲಿಂಗಪ್ಪ , ಬಿ.ಡಿ. ಜತ್ತಿ ಮಂತ್ರಿಮAಡಳಲ್ಲಿ ೧೯೬೨ ರಲ್ಲಿ ಎಸ್.ಆರ್.ಕಂಠಿ ಮಂತ್ರಿಮAಡಳದಲ್ಲಿ ಗವಿಸಿದ್ದಪ್ಪಗೌಡ ಪಾಟೀಲರು ಸುರಪುರರವರು ವಿರೇಂದ್ರ ಪಾಟೀಲ, ದೇವರಾಜ ಅರಸ, ಕಲ್ಲೂರರವರು ದೇವರಾಜ ಅರಸ ಗುಂಡುರಾವ, ರಾಮಕೃಷ್ಣ ಹೆಗಡೆ ಮಂತ್ರಿಮAಡಳದಲ್ಲಿ ಖೇಡರವರು ಎಸ್.ಆರ್.ಬೊಮ್ಮಾಯಿ ಮಂತ್ರಿಮAಡಳದಲ್ಲಿ ರವಿಕಾಂತ ಪಾಟೀಲರು ಎಸ್.ಎಂ.ಕೃಷ್ಣ ವೀರಪ್ಪ ಮೊಯ್ಲಿ, ಎಸ್. ಬಂಗಾರೆಪ್ಪ, ರವಿಕಾಂತ ಪಾಟೀಲರು ಎಚ್.ಡಿ.ದೇವೆಗೌಡ, ಜೆ.ಎಚ್.ಪಟೇಲ, ರವಿಕಾಂತ ಪಾಟೀಲರು ಧರ್ಮಸಿಂದ ಎಚ್.ಡಿ.ಕುಮಾರಸ್ವಾಮಿ, ಡಾ|| ಸಾರ್ವಭೌಮ ಬಗಲಿಯವರು ಬಿ.ಎಸ್.ಯಡೆಯೂರಪ್ಪ, ಸದಾನಂದ ಗೌಡ ಜಗದೀಶ ಶೆಟ್ಟರ ಯಶವಂತರಾಯಗೌಡ ಪಾಟೀಲರು ಯಡೆಯೂರಪ್ಪ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ಮಂತ್ರಿಯಾಗಿಲ್ಲ.
ಒಟ್ಟಿನಲ್ಲಿ ಇಂಡಿ ಮತಕ್ಷೇತ್ರ ಮಂತ್ರಿಗಿರಿ ವಂಚಿತ ಮತಕ್ಷೇತ್ರವಾಗಿದೆ.



















