ಸಮಾಜದಲ್ಲಿ ಜನರು ಶಿಕ್ಷಣದ ಮಹತ್ವವನ್ನು ತಿಳಿಯಬೇಕು: ಶಾಸಕ ಎಂಆರ್ ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು:ಸಮಾಜದ ಜನರು ಶಿಕ್ಷಣದ ಮಹತ್ವ ಅರಿತು ವಿಧ್ಯೆಯ ಮೂಲಕ ಸಮಾಜದ ಮಕ್ಕಳು ಉತ್ತಮ ಹಂತಕ್ಕೆ ತಲುಪಬೇಕು. ಶಾಸಕ ಎಂ.ಆರ್ ಮಂಜುನಾಥ್ ರವರು ಹೇಳಿದರು.
ತಾಲ್ಲೂಕಿನ ಪುಣ್ಯಕ್ಷೇತ್ರ ಮಲೈ ಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 891ನೇ ಹಡಪದ ಅಪ್ಪಣ್ಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು ಮಲೆ ಮಹದೇಶ್ವರ ಬೆಟ್ಟದಲ್ಲಿ ಇಡೀ ರಾಜ್ಯದ ಉದ್ದಗಲಕ್ಕೂ ಇರುವಂತಹ ಸವಿತಾ ಸಮಾಜದ ಜನ ಒಂದೆಡೆ ಸೇರಿ ಹಬ್ಬದ ರೀತಿಯಲ್ಲಿ ಅಪ್ಪಣ್ಣ ಜಯಂತಿ ಆಚರಣೆ ಮಾಡುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ಅಪ್ಪಣ್ಣ ಜಯಂತಿ ಇಷ್ಟೊಂದು ಅದ್ದೂರಿಯಾಗಿ ನಡೆಯಲು ನಿಮ್ಮಲ್ಲಿರುವ ಉತ್ತಮ ಸಂಘಟನೆ ಗಟ್ಟಿಯಾಗಿದೆ ಎಂದಾರ್ಥ ಆಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟನೆ ಮಾಡುವ ಮೂಲಕ ಎಲ್ಲರು ಒಂದಾಗಿ ಬಾಳಬೇಕು. ಜೊತೆಗೆ ಮಕ್ಕಳನ್ನು ಯಾರು ಸಹ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ. ಎಂದರು.
ಪ್ರತಿಭಾ ಪುರಸ್ಕಾರ : ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಹಾಗೂ ಪದವಿ ಹಂತದಲ್ಲಿ ಹೆಚ್ಚು ಅಂಕ ಪಡೆದ ಸವಿತಾ ಸಮಾಜದ ಮಕ್ಕಳನ್ನು ಕಾರ್ಯಕ್ರಮ ದಲ್ಲಿ ಸನ್ಮಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸಲೂರು ಬೃಹನ್ ಮಠದ ಪೀಠಾಧಿಪತಿಗಳಾದ ಡಾ.ಶಾಂತಮಲ್ಲಿಕಾರ್ಜುನ ಸ್ವಾಮಿಗಳು ,ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಭಾರತಿ ಅಪ್ಪಣ್ಣ ಸ್ವಾಮಿಗಳು, ಸವಿತಾ ಸಮಾಜದ ಚಾ.ನಗರದ ಜಿಲ್ಲಾಧ್ಯಕ್ಷರಾದ ಕೆ.ವಿ ವೆಂಕಟರಾಜು,ಚಾ.ನಗರದ ತಾಲೂಕು ಅಧ್ಯಕ್ಷರಾದ ಬಸವಣ್ಣ ಬದನಗುಪ್ಪೆ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ವಿಠಲ,ಯಳಂದೂರು ತಾ.ಅಧ್ಯಕ್ಷ ಶ್ರೀಕಂಠಸ್ವಾಮಿ, ಕೊಳ್ಳೇಗಾಲ ತಾ.ಅಧ್ಯಕ್ಷ ರಾಚಶೆಟ್ಟಿ,ರಾಮಪುರ ತಾ.ಅಧ್ಯಕ್ಷ ಸಿದ್ದರಾಜು, ಮಹದೇಶ್ವರ ಬೆಟ್ಟದ ಸವಿತಾ ಸಮಾಜದ ಮಹಿಳಾ ಅಧ್ಯಕ್ಷರಾದ ಸುನಂದ,ಮಲೈ ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರ್ಚನ, ಗ್ರಾಂ ಪಂ ಸದಸ್ಯರಾದ ರತ್ನಮ್ಮ ಹಾಗೂ ಮುಖಂಡರುಗಳಾದ ಡಿ.ಆರ್ ಮಾದೇಶ್,ಜೇಸಿಂ ಪಾಷ,ಗೋಪಾಲ್ ನಾಯಕ,ವಿಜಯ್ ಕುಮಾರ್ ,ಬಸವರಾಜು,ಹಾಗೂ ಸಮಾಜದ ಮುಖಂಡರುಗಳು ಹಾಜರಿದ್ದರು.



















