ಇಂಡಿ : ಹೋಳಿ ಹಬ್ಬದ ಪ್ರಯುಕ್ತ ನಿಂಬೆನಾಡು ಖ್ಯಾತಿಯ ಇಂಡಿ ಪೊಲೀಸ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಪಟ್ಟಣ ಪೊಲೀಸ ಠಾಣಾ ಆವರಣದಲ್ಲಿ ಸಿಪಿಐ ಭೀಮನಗೌಡ ನೇತೃತ್ವದಲ್ಲಿ ಹಿಂದೂ ಮುಸ್ಲಿಂ ಮುಖಂಡರ ಜೊತೆಗೆ ಶಾಂತಿ ಸಭೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ಡಿ.ವಾಯ್.ಎಸ್.ಪಿ ಶ್ರೀಧರ ದೊಡ್ಡಿ ವಹಿಸಿ ಮಾತಾನಾಡಿದ ಅವರು, ಹೋಳಿ ಹಬ್ಬದಲ್ಲಿ ಅಹಿತಕರ ಘಟನೆಗಳ ಆಗದಂತೆ ಮುಖಂಡರು ನೋಡಿಕೊಳ್ಳಬೇಕು. ಇನ್ನು ಹಿಂದೂ ಮುಸ್ಲಿಂ ಏಕ್ ಹೈ ಎಂದು ಹೋಳಿ ಹಬ್ಬ ಆಚರಣೆ ಮಾಡಬೇಕು.
ಒತ್ತಾಯಪೂರ್ವಕವಾಗಿ ಯಾರಿಗೂ ಬಣ್ಣ ಹಚದಂತೆ ಜಾಗೃತಿ ವಹಿಸಿ ಜೊತೆಗೆ ಯಾವುದೇ ರೀತಿಯ ಅಹಿತ ಘಟನೆಗಳಿಗೆ ಅವಕಾಶ ಮಾಡಕೋಡಬೇಡಿ ಎಂದರು. ಒಂದು ವೇಳೆ ಚಿಕ್ಕ ಪುಟ್ಟ ಗಲಭೆ ನಡೆದರೂ ಕೂಡಾ ಕೂಡಲೇ ಮಾಹಿತ ನೀಡಿ, ಈಗಾಗಲೇ ಆಯಾಕಟ್ಟಿನ ಸ್ಥಳಗಳಲ್ಲಿ ಸೂಕ್ತ ಬಂದು ಬಸ್ತು ಮಾಡಿಕೊಳ್ಳಲಾಗಿದೆ. ಅಲ್ಲದೆ ಕಾನೂನು ವ್ಯವಸ್ಥೆಗೆ ಭಂಗ ತಂದರೆ ಕಾನೂನು ಮೂಲಕ ಸೂಕ್ತ ಕ್ರಮ ತೆಗೆದುಕೊಳ್ಳುಲಾಗದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಮುಖಂಡರು ಕಾಸುಗೌಡ ಬಿರಾದಾರ, ಇಲಿಯಾಸ ಬೊರಾಮಣಿ, ಜಗದೀಶ್ ಕ್ಷೇತ್ರಿ, ಅನೀಲಗೌಡ ಬಿರಾದಾರ ಮಾತಾನಾಡಿದ ಅವರು, ಕಳೆದು ಎರಡು ವರ್ಷ ಕೊವಿಡ್ ಮಾರಕ ರೋಗಕ್ಕೆ ನಲುಗಿ ಹೋಗಿದ್ದೆವೆ. ಉತ್ಸಾಹ, ಸಂತೋಷ, ಸಂಭ್ರಮವೆ ಕಿತ್ತುಕೊಂಡಿತ್ತು. ಆದರೆ ಈ ಬಾರಿ ಹೋಳಿಯಲ್ಲಿ ಕೆಟ್ಟ ಮನಸ್ಥಿತಿ ದಹನಿಸಿ ಹಬ್ಬ ಆಚರಣೆ ಮಾಡೋಣ ಎಂದರು. ಆದರೆ ಯಾವುದೇ ಕಾರಣಕ್ಕೂ ಕಾನೂನು ಉಲ್ಲಂಗನೆ ಮಾಡಲು ಅವಕಾಶ ಮಾಡಿಕೊಡೊದಿಲ್ಲ. ಪೋಲಿಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುತ್ತೆವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಯಲ್ಲಪ್ಪ ಹದಿರಿ, ಪುರಸಭೆ ಸದಸ್ಯ ಅಯೂಬ್ ಬಾಗವಾನ, ಶಬ್ಬೀರ ಖಾಜಿ, ಖಾದಿರ್ ಡಾಂಗೆ, ಭೀಮಾಶಂಕರ ಮೂರಮನ, ಶಿರಾಜ ಮುಜಾವರ್, ರೈಸ್ ಅಷ್ಟೇಕರ್, ಜಟ್ಟೆಪ್ಪ ರವಳಿ, ಬುದ್ದುಗೌಡ ಬಿರಾದಾರ, ಪ್ರಶಾಂತ ಕಾಳೆ, ಲಿಂಬಾಜಿ ರಾಠೋಡ ಅನೇಕ ಮುಖಂಡರು ಹಾಗೂ ಯುವಕರು ಉಪಸ್ಥಿತರು.