ಅಫಜಲಪುರ: ೨೦೨೨-೨೩ ನೇ ಸಾಲಿಗೆ ವಿದ್ಯಾರ್ಥಿಗಳು ಎನ್‌ಇಪಿ ಅಡಿಯಲ್ಲಿ ಕಡ್ಡಾಯವಾಗಿ ನಿಗದಿ ಪಡಿಸಿದ ವೆಬ್‌ಸೈಟ್‌ನಲ್ಲಿ ಸೂಚಿತ ಆನ್‌ಲೈನ್ ಲಿಂಕ್ ಮೂಲಕ ಪ್ರವೇಶ ಪಡೆದುಕ್ಕೊಳ್ಳಲು ಹೆಚ್‌ಕೆಇ ಸಂಸ್ಥೆಯ ನಿರ್ಧೇಶಕ ಅರುಣ್ ಕುಮಾರ ಎಂ.ವೈ. ಪಾಟೀಲ ಚಾಲನೆ ನೀಡಿದರು.
ಪಟ್ಟಣದ ಸರಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ೨೦೨೨-೨೩ ನೇ ಸಾಲಿನ ಬಿಎ, ಬಿಎಸ್‌ಸಿ, ಬಿಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪ್ರವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಈ ಮೊದಲು ವಿದ್ಯಾರ್ಥಿಗಳು ಎನ್‌ಇಪಿ ಪ್ರಕಾರ ಸರಕಾರ ಆನ್‌ಲೈನ್ ಮೂಲಕ ಪಡೆಯಲು ವ್ಯವಸ್ಥೆ ಮಾಡಿದೆ. ವಿದ್ಯಾರ್ಥಿಗಳು ಉಪನ್ಯಾಸಕರ ಸಹಾಯ ಪಡೆದು ಪದವಿ ಪ್ರವೇಶ ಪಡೆದುಕೊಳ್ಳಬೇಕು ಎಂದ ಅವರು ಈಗಾಲೇ ಕಾಲೇಜು ಸಾಕಷ್ಟು ಅಭಿವೃದ್ಧಿ ಕಾಣುತ್ತಲಿದೆ. ಆ ನಿಟ್ಟಿನಲ್ಲಿ ಸುಸಜ್ಜಿತ ಸಭಾ ಭವನ ಮತ್ತು ಗುಣಮಟ್ಟದ ಕಂಪ್ಯೂಟರ್, ಲ್ಯಾಬ್ ಮಂಜೂರು ಮಾಡಲಾಗಿದೆ. ಇನ್ನು ಕಾಲೇಜಿಗೆ ಅವಶ್ಯಕ ಸೌಕರ್ಯಗಳ ಅವಶ್ಯಕತೆ ಇದ್ದಲ್ಲಿ ಕೂಡಲೇ ಶಾಸಕರ ಗಮನಕ್ಕೆ ತಂದು ಎಲ್ಲ ಸೌಕರ್ಯಗಳು ಒದಗಿಸಿಕೊಡಲಾಗುವುದು ಎಂದರು.
ಪ್ರಭಾರಿ ಪ್ರಾಚಾರ್ಯ ಡಾ. ಸಂತೋಷ ಹುಗ್ಗಿ ಮಾತನಾಡಿ ಕಾಲೇಜಿನಲ್ಲಿ ಯುಜಿ ಮತ್ತು ಪಿಜಿ ಕೋರ್ಸ್ ಇರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಓದಲು ಬರುತ್ತಾರೆ. ಆದರೆ ಅವರಿಗೆ ಕುಳಿತುಕ್ಕೊಳ್ಳಲು ಸ್ಥಳಾವಕಾಶದ ಸಮಸ್ಯೆಯಾಗುತ್ತಿದೆ. ಅದಕ್ಕಾಗಿ ಸ್ವತಂತ್ರ ಕಟ್ಟಡ ನಿರ್ಮಿಸಬೇಕು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಡಿಜಿಟಲ್ ಲೈಬ್ರೆರಿ ಹಾಗೂ ಇಂಟರ್‌ನೆಟ್ ಸೌಲಭ್ಯ ನೀಡಬೇಕು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಕೋಣೆಗಳ ಕೊರತೆಯಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಬಂದು ಹೋಗಲು ದೂರವಾಗುತ್ತಿದೆೆ. ಅದಕ್ಕೆ ಕಾಲೇಜಿನ ಸಮಯಕ್ಕೆ ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಅಂಬ್ರೀಶ್ ಬುರಲಿ, ಸಿಬ್ಬಂದಿಗಳಾದ ಡಾ. ಸಾವಿತ್ರಿ ಕೃಷ್ಣ, ಡಾ. ದತ್ತಾತ್ರೇಯ ಹೆಚ್, ಖುತೇಜಾ ನಸ್ರೀನ್, ಶ್ರೀದೇವಿ ರಾಠೋಡ, ಡಾ. ಸಂಗಣ್ಣ ಸಿಂಗೆ , ಹೀರು ರಾಠೋಡ, ವೈಜನಾಥ ಭಾವಿ, ಭಗವಾನಸಿಂಗ್ ರಜಪೂತ್, ಪವನ್ ಕುಮಾರ ನಾಯ್ಕೋಡಿ, ಮಡಿವಾಳಪ್ಪ ಮುಗಳಿ, ರಾಜೇಶ್ವರಿ ಸರಸಂಬಿ, ಶಾಮರಾವ್, ಮಂಜುನಾಥ, ಗೌರಿಶಂಕರ ಭೂರೆ, ಮಮತಾ ಪಾಟೀಲ್, ಚಿದಾನಂದ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.