ಮುದ್ದೇಬಿಹಾಳ : ಭಾರತೀಯ ಶಿಕ್ಷಣ ಮಂಡಲ, ಕರ್ನಾಟಕ ಉತ್ತರ ಪ್ರಾಂತ ವಿಜಯಪುರ ಜಿಲ್ಲೆ ಯವರು ಏರ್ಪಡಿಸಿದ ಗುರು ನಮನ 2025 ಕಾರ್ಯಕ್ರಮದಲ್ಲಿ ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷರಾದ ಶ್ರೀ ಬಿ.ಎಸ್.ಬಾಪಗೊಂಡ ಜಿಲ್ಲಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ.ಬಿ.ಗುಡ್ಡದ ಹಾಗೂ ಭಾರತೀಯ ಶಿಕ್ಷಣ ಮಂಡಲ, ದವರು ಹಾಗೂ ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ರಾದ ಬಸಯ್ಯ ಹಿರೇಮಠ , ಎಚ್.ವೆಂಕಟೇಶ, ಬಸವರಾಜ ಕೌಲಗಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಅದ್ಯಕ್ಷ ಹಾಗೂ ಭಾರತೀಯ ಶಿಕ್ಷಣ ಮಂಡಲ ಉಪಾಧ್ಯಕ್ಷ ಹಾಗೂ ಸುರೇಶ ಕುಲಕರ್ಣಿ ಖ್ಯಾತ ಶಿಕ್ಷಣ ತಜ್ಞರು, ದಾರವಾಡ ಇನ್ನೂ ಹಲವಾರು ಗಣ್ಯಾತೀತ ಗಣ್ಯರ ಸಮ್ಮುಖದಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದರು ಮತ್ತು ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ (ಸಿ.ಬಿ.ಎಸ್.ಇ) ಶಾಲೆಯ ಚಿತ್ರಕಲಾ ಶಿಕ್ಷಕರಾದ ಬಸವರಾಜ ಹಣಮಪ್ಪ ಹಡಪದ ರವರು ಚಿತ್ರಕಲಾ ಕ್ಷೇತ್ರದಲ್ಲಿ ಹಲವಾರು ಗುಂಪು ಚಿತ್ರಕಲಾ ಪ್ರದರ್ಶನ, ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಹಲವಾರು ಕಲಾಕೃತಿಗಳಿಗೆ ನಗದು ಬಹುಮಾನ, ಹಲವಾರು ಕಲಾಕೃತಿಗಳಿಗೆ ಅತ್ಯುತ್ತಮ ಕಲಾಕೃತಿ ಪ್ರಶಸ್ತಿಗಳು ಮತ್ತು ಹಲವಾರು ಕಲಾ ಶಿಬಿರಗಳು ಹಾಗೂ 2023-24 ರಲ್ಲಿ ಜ್ಞಾನಾಂಜನ ಶಿಕ್ಷಣ ಸಂಸ್ಥೆ ಕೋರವಾರ ಇವರ ಸಂಸ್ಥೆಯಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಚಿತ್ರಕಲಾವಿದ ಮತ್ತು ಹಲವಾರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಹಲವಾರು ರಾಜ್ಯ ಪ್ರಶಸ್ತಿಗಳು ಹಾಗೂ ಚಿತ್ರಕಲಾ ಭೂಷಣ ಪ್ರಶಸ್ತಿ ಹೀಗೆ ನನ್ನ ಚಿಕ್ಕ ಸಾಧನೆಯನ್ನು ಗುರುತಿಸಿ ಕೆಂಗಲ್ ಹಣಮಂತ್ರಾಯ ರಂಗ ಮಂದಿರದಲ್ಲಿ ಚಿತ್ರಕಲಾ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಯಾದ ಬಸವರಾಜನಿಗೆ ಪೂಜ್ಯರು,ಭಾರತೀಯ ಶಿಕ್ಷಣ ಮಂಡಲ, ಆಡಳಿತಾದಿಕಾರಿಗಳು ಹಾಗೂ ಗಣ್ಯಾತೀತ ಗಣ್ಯರ ಸಮ್ಮುಖದಲ್ಲಿ ಶ್ರೀಯುತರಿಗೆ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಈ ಪ್ರಶಸ್ತಿ ಪಡೆದಿದ್ದಕ್ಕೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ರು, ಶಾಲೆಯ ನಾಮಿನಿ ಚೇರ್ಮನ್ ರಾದ ಶ್ರೀ ಎಸ್.ಎಚ್.ನಾಡಗೌಡ ರವರು ಶಾಲೆಯ ಆಡಳಿತಾದಿಕಾರಿಗಳು ಹಾಗೂ ಪ್ರಾಚಾರ್ಯರಾದ ಶ್ರೀಮತಿ ವಿಜಯಲಕ್ಷ್ಮೀ ರಾ ಪಟ್ಟೇದ,ಹಾಗೂ ಉಪ ಪ್ರಾಚಾರ್ಯರು ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದರು.