ಭೂ ಪರಿಹಾರ ನೀಡಲು ಜು. ೩೧ ರಂದು ಸಭೆ
ಭೂ ಪರಿಹಾರ ನೀಡಲು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ..! ಇಂಡಿಯಲ್ಲಿ ಜು-31 ರಂದು ಮಹತ್ವದ ಸಭೆ
ಇಂಡಿ : ವಿಜಯಪುರದಿಂದ ರಾಷ್ಟ್ರೀಯ ಹೆದ್ದಾರಿ 548B ರಸ್ತೆಯು ಇಂಡಿ ಮಾರ್ಗವಾಗಿ ನಾಗಠಾಣ, ಅಥರ್ಗಾ, ತಡವಲಗಾ, ರೂಗಿ, ಇಂಡಿ, ಇಂಗಳಗಿ, ನೇಹರು ನಗರ, ಹಿರೇಬೇವನೂರ, ಅಗರಖೇಡ, ಚಿಕ್ಕಮಣ್ಣೂರ ಗ್ರಾಮಗಳ ಮೂಲಕ ಹಾದು ಹೊಗಿದೆ. ಈ ರಸ್ತೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆಗ್ರಹಿಸಿ ಸಭೆ ಕರೆಯಲಾಗಿದೆ.
ಸಭೆ ಜು.೩೧ ಗುರುವಾರರಂದು ಬೆಳಿಗ್ಗೆ ೯:೩೦ ಗಂಟೆಗೆ ಇಂಡಿ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿೆ ಕರೆಯಲಾಗಿದೆ. ಪ್ರತಿಯೊಬ್ಬ ರೈತರು ಈ ಸಭೆಗೆ ಆಗಮಿಸಬೇಕು ಎಂದು ಮುಖಂಡರಾದ ಬಿ.ಕೆ.ಗೊಟ್ಯಾಳ(ಅಥರ್ಗಾ) ಹಾಗೂ ಅಪ್ಪಾಸಾಹೇಬ ತಾಂಬೆ(ಇAಡಿ) ಜಂಟಿಯಾಗಿ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಂದಾಯ ಉಪವಿಭಾಗಾಧಿಕಾರಿಗಳ ಮೂಲಕ ನೊಟೀಸ ನೀಡಿ ಸುಮಾರು ೮-೯ತಿಂಗಳು ಕಾಲ ಗತಿಸುತ್ತಾ ಬಂದಿದ್ದು ಇಲ್ಲಿಯವರೆಗೆ ಒಂದು ಪೈಸೆ ಕೂಡಾ ಭೂಪರಿಹಾರದ ಹಣ ನೀಡಿಲ್ಲ. ಅಲ್ಲದೆ ರೈತರಿಗೆ ಭೂಪರಿಹಾರ ನೀಡದೆ ರಸ್ತೆಗೆ ಸಂಬAದಿಸಿದ ಯಾವುದೆ ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಸುಪ್ರಿಮ ಕೊರ್ಟ ಆದೇಶ ಇದೆ. ಹೀಗಿದ್ದರು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರಾಷ್ಟಿçÃಯ ಹೆದ್ದಾರಿ ೫೪೮ಬಿ ರಸ್ತೆಯ ಕಾಮಗಾರಿ ಕೈಗೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ್ಲ. ಆದರು ಸಹ ರಸ್ತೆ ಕಾಮಗಾರಿಗೆ ಬಹುತೇಕ ಯಾವ ರೈತರು ಅಡೆ ತಡೆ ಮಾಡಿಲ್ಲ ಎಂದರು.
ಆದರೆ ಇದನ್ನು ದುರುಪಯೋಗ ಪಡಿಸಿಕೊಂಡ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಇದನ್ನು ಹಾಗೆ ಬಿಟ್ಟರೆ ಮುಂದಿನ ದಿನಮಾನಗಳಲ್ಲಿ ರೈತರಿಗೆ ಯಾರು ಹೇಳೊರು ಕೇಳೊರು ಇಲ್ಲದ ಸ್ಥಿತಿ ಬರುತ್ತದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ರೈತರು ಸ್ವಇಚ್ಛೆಯಿಂದ ಈ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸಪ್ಪ ಅರ್ಜುಣಗಿ, ವಿಜಯಕುಮಾರ ಉಡಚಾಣ, ನರಸಿಂಗ ಪವಾರ, ಮಳಗೂ ಬೇವನೂರ, ಮಂಜು ದೇವರ, ಎಸ್.ಬಿ.ಪಾಟೀಲ(ಮೈದರಗಿ) ಆರ್.ಎಲ್.ಚಾಬುಕಸವಾರ, ಜಕ್ಕಪ್ಪ ಪೂಜಾರಿ, ಲಕ್ಷö್ಮಣ ಹಂದ್ರಾಳ ಮತ್ತಿತರಿದ್ದರು.
ಪೋಟೊ – ೨೯ ಇಂಡಿ ೦೨ ಬಿ.ಕೆ.ಗೊಟ್ಯಾಳ(ಅಥರ್ಗಾ) ಹಾಗೂ ಅಪ್ಪಾಸಾಹೇಬ ತಾಂಬೆ(ಇAಡಿ) ಇವರ ಭಾವಚಿತ್ರ.



















