ನಾಗಠಾಣ ಕ್ಷೇತ್ರ ಸರ್ವಾಂಗಿಣ ಅಭಿವೃದ್ದಿಯೆ ಕಡೆಗೆ ದಾಪುಗಾಲು ; ಶಾಸಕ ವಿಠ್ಠಲ ಕಟಕದೊಂದ ಹೇಳಿಕೆ.
ಇಂಡಿ : ನಮ್ಮ ಸರಕಾರ ಜನರಿಗೆ ೫ ಗ್ಯಾರೆಂಟಿ ಯೋಜನೆಗಳು ಕೊಡುವುದರ ಜೊತೆಯಲ್ಲಿ ಅನೇಕ ಜನಪರ ಕೆಲಸಗಳು ನಡೆಯುತ್ತಿವೆ. ಜನರಿಗೆ ಅವಶ್ಯವಾಗಿರುವ ರಸ್ತೆಯ ಕಾಮಗಾರಿಗಳು ನನ್ನ ಕ್ಷೇತ್ರದಲ್ಲಿ ನಡೆಯುತ್ತಿವೆ ಎಂದು ಹೇಳಿದರು.
ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದ ಇಂಡಿಯ ರೈಲು ನಿಲ್ದಾಣ ದಿಂದ ಹಲಸಂಗಿ ಗ್ರಾಮದ ಮೂಲಕ ರಾಷ್ಟೀಯ ಹೆದ್ದಾರಿ ೫೨ ರ ವರೆಗೆ ೯.೫೦ ರಿಂದ ೧೪.೦೦ ವರಗೆ ಅಗಲಿಕರಣ ಮಾಡಿ ರಸ್ತೆ ಸ್ಮಧಾರಣೆ ೫೦೦.೦೦ ಲಕ್ಷ ರೂ. ರಸ್ತೆ ಭೂಮಿ ಪೂಜೆ ನೇರವೇರಿಸಿದ ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ರವರು ಮಾತನಾಡಿದರು.
ನಾಗಠಾಣ ಕ್ಷೇತ್ರದಲ್ಲಿ ಅನೇಕ ಜನಪರ ಯೋಜನೆಗಳಿಗೆ ಸಾವಿರಾರು ಕೋಟಿ ರೂ ಮಂಜೂರು ಮಾಡಿದ್ದೇನೆ. ಚಡಚಣ ಪಟ್ಟಣಕ್ಕೆ ಅನೇಕ ಯೋಜನೆ ತಂದಿದ್ದೇನೆ, ರೈತರ ಸಲುವಾಗಿ ಅನೇಕ ವಿದ್ಯುತ್ ಸಬ್ ಸ್ಟೇಶನಗಳು ಮಾಡಿದ್ದೇನೆ, ಕ್ಷೇತ್ರದಲ್ಲಿ ಹಗಲು – ಇರಳು ನನ್ನ ಮತದಾರ ಸಲುವಾಗಿ ನನ್ನ ಆರೋಗ್ಯ ಲೆಕ್ಕಿಸದೇ ಕೆಲಸ ಮಾಡುತ್ತಿದ್ದೇನೆ ಅದು ನನಗೆ ತುಂಬಾ ಸಂತೋಷವಾಗಿದೆ.
ಸಾಮಾನ್ಯ ಜನರೊಂದಿಗೆ ಇರುವ ಮನುಷ್ಯ ಮತ್ತು ಸಾಮಾನ್ಯ ಕುಟುಂಬದ ಬಡ ವ್ಯಕ್ತಿ, ನನಗೆ ವಿಜಯಪುರ ಜಿಲ್ಲೇಯಲ್ಲಿ ಅತೀ ಹೆಚ್ಚು ಮತ ನೀಡಿ ೨೫ ಸಾವಿರಕ್ಕೂ ಹೆಚ್ಚಿನ ಮತದಿಂದ ಜಯಶಾಲಿಯಾಗಲು ಸಹಕಾರ ನೀಡಿದ ನನ್ನ ಕ್ಷೇತ್ರದ ಜನತೆಗೆ ನಾನು ಅವರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ರಾಜೇಂದ್ರ ಕಟ್ಟಿಮನಿ, ಮಲ್ಲಿಕಾರ್ಜುನ ವಾಲಿಕಾರ, ಆರ್ ಎ ಪಾಟೀಲ,ನಾಗೇಂದ್ರ ಕೊಟ್ಟಲಗಿ, ಟಿಕೆ ಬೇಗಾರ, ಆನಂದ ಗುಜರಿ, ಮೈಬೂಬ ಸಂಜವಾಡ, ಗುತ್ತಿಗೆದ್ದಾರೆಲ್ ಡಿ ಮಡಗೊಂಡ, ಕಾಂತು ಸಾಹುಕಾರ, ಶೀಲವಂತ ಅಡಕಿ, ಜೆಟ್ಟೆಪ್ಪ ಕೋಳಿ ಇತತರು ಇದ್ದರು.