ನ – ೧೩,೧೪,ರಂದು ಶ್ರೀ ನಾಗಮ್ಮ ತಾಯಿ ಜಾತ್ರಾ ಮಹೋತ್ಸವ.
ಅಫಜಲಪುರ : ಸಕಲ ಇಷ್ಟಾರ್ಥಗಳನ್ನು ಪೂರೈಸುವ, ಬೇಡಿದವರಿಗೆ ಬೇಡಿದನ್ನ ಕರುಣಿಸುವ ಜಗನ್ಮಾತೆಯಾದ ತಾಲೂಕಿನ ಸುಕ್ಷೇತ್ರವಾದ ಶೇಷಗಿರಿವಾಡಿ ಗ್ರಾಮದ ಶ್ರೀ ನಾಗಮ್ಮ ತಾಯಿ ದೇವಿಯ ಜಾತ್ರಾ ಮಹೋತ್ಸವ, ಇದೇ ತಿಂಗಳು ನವಂಬರ್ ೧೩,೧೪ ರಂದು ಎರಡು ದಿನಗಳ ಪರಿಯಂತ ಜಾತ್ರಾ ಮಹೋತ್ಸವ ವಿರುತ್ತದೆ. ೧೩ ರಂದು ದೇವಿಯ ಅಡ್ಡಪಲ್ಲಕ್ಕಿ ಮೆರವಣಿಗೆ ಹಾಗೂ ಸುಪ್ರಸಿದ್ಧ ಡೊಳ್ಳಿನ ಗಾಯಕರಿಂದ ಪದಗಳು ಅದೇ ದಿನ ರಾತ್ರಿ ರಂಗು ರಂಗಿನ ಮದ್ದು ಸುಡುವುದು ನಂತರ ೧೪ ರಂದು ಮದ್ಯಾನ ೧೨:ಗಂಟೆ ಸಮಯದಲ್ಲಿ ಸುಭಜಿತ ಸಾಮೂಹಿಕ ವಿವಾಹ ಕಾರ್ಯಕ್ರಮವಿದ್ದು, ನವ ವಧು ಹಸೆಮಣೆ ಏರಲಿದ್ದು ತಾಲೂಕಿನ ಸಮಸ್ತ ಜನರು ಈ ಜಾತ್ರೆಯಲ್ಲಿ ಭಾಗವಹಿಸಿ ವಧು ವರರಿಗೆ ಆಶೀರ್ವದಿಸಬೇಕೆಂದು, ಶ್ರೀಮಠದ ಕಮಿಟಿಯವರು ತಿಳಿಸಿರುತ್ತಾರೆ. ತಾಲೂಕಿನ ಜನರು ದೇವಿಯ ಜಾತ್ರೆಗೆ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಕಮಿಟಿಯವರ ಹಾಗೂ ಗ್ರಾಮಸ್ಥರ ಮನವಿ ಆಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಲಿದ್ದಾರೆ ಹಾಗೂ ಗ್ರಾಮಸ್ಥರಾದ ಮಹದೇವ್ ಗೌಡ ಸಿರಾನಾಳ, ಮಲ್ಲಯ್ಯ ಸ್ವಾಮಿ, ತಿಪ್ಪಣ್ಣ ಅವಟೆ, ಸಂತೋಷ್ ಅವಟೆ, ಸಚಿನ್ ಜಮಾದಾರ್, ರವಿ ಜಮಾದಾರ್, ದೋಂಡಿಬಾ ವಳಸಂಗ, ಶಂಕರ್ ಪೂಜಾರಿ,ಹನುಮಂತ ಅಂಕಲಗಿ, ಸೈಪನಸಾಬ್ ಕಸಾಯಿ, ರಾಮ್ ಹಲಸಂಗಿ, ಸಂಜಯ್ ಚಾಂಬರ್, ಧೋಂಡಿಬಾ ಜಾದವ್, ನಿಂಗಪ್ಪ ಪೂಜಾರಿ, ಶಂಕರ್ ಅಗರಖೇಡ, ಭೀಮಶಂಕರ್ ಬೋವಿ, ಬಸವರಾಜ್ ಶಿರ್ನಾಳ, ಸೇರಿದಂತೆ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.