ವಿಜಯಪುರ : ಭೀಮಾತೀರದಲ್ಲಿ ಮಾವಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಭೀಮಾತೀರ ಖ್ಯಾತಿಯ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ಹಲವು ಕಡೆಗಳಲ್ಲಿ ಮಾವಾ ದಂಧೆ ಮಾಡಲಾಗುತ್ತಿರುವ ಆರೋಪ ಕೇಳಿ ಬಂದಿದೆ. ಇನ್ನು ಮಾವಾ ತಯಾರಿಸಲು ಖದೀಮರು ಮಶೀನ್ ಅಳವಡಿಸಿಕೊಂಡಿದ್ದಾರೆ. 8 ಕಡೆಗಳಲ್ಲಿ ಶೆಡ್ ಹಾಕಿಕೊಂಡಿ ಮಾವಾ ತಯಾರಿಕೆ ಮಾಡಲಾಗುತ್ತಿದೆ. ನೆರೆಯ ಮಹಾರಾಷ್ಟ್ರ ಸೇರಿ ಹಲವು ತಾಲೂಕು ಕೇಂದ್ರಗಳಿಗೆ ಮಾವಾ ಸಪ್ಲೈ ಆಗುತ್ತಿದೆ. ಆದ್ರೇ, ಅಧಿಕಾರಿಗಳು ಜಾಣ ಕುರುಡರಂತೆ ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದಾರೆ.