ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣ ಪರಿಶೀಲಿಸಿದ: ಶಾಸಕ ಎಂ.ಆರ್ ಮಂಜುನಾಥ್.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು:ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹೊಸ ಹೈಟೆಕ್ ಬಸ್ ನಿಲ್ದಾಣ ಮಾಡಲು ಈಗಾಗಲೇ ನೀಲಿ ನಕ್ಷೆ ತಯಾರು ಮಾಡಲಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕರು ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮುಖ್ಯಮಂತ್ರಿಗಳ
ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರ ಸಭೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡಲು ಒಪ್ಪಿಗೆ ನೀಡಲಾಗಿದೆ.
ಈ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಜಿಲ್ಲಾ ವ್ಯವಸ್ಥಾಪಕರ ಜೊತೆ ಖುದ್ದು ಅದರ ರೂಪು ರೇಷೆಗಳ ಬಗ್ಗೆ ಚರ್ಚಿಸಿ ನಡೆಸಿದ್ದು ಸೂಕ್ತ ರೀತಿಯಲ್ಲಿ ನಿಲ್ದಾಣ ನಿರ್ವಹಣೆ ಮಾಡುವಂತೆ ಸೂಚಿಸಿದರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿರುವ ಕ್ಯಾಂಟೀನ್ ಬೇಟಿ ನೀಡಿ ಎಲ್ಲವನ್ನು ಗಮನಿಸಿದ ಶಾಸಕರು ಕ್ಯಾಂಟಿನ್ ನಲ್ಲಿ ಸ್ವಚ್ಚತೆ ಕಾಪಾಡುವಂತೆ ಡಿ.ಪೊ ಟಿಸಿ ಗೆ ಸೂಚಿಸಿದರು. ಹಾಗೆಯೆ ಬಸ್ ನಿಲ್ದಾಣ ಬಳಿ ಇರುವ ಶೌಚಾಲಯಗಳು ಬೆಟ್ಟಕ್ಕೆ ಬರುವಂತ ಭಕ್ತಾದಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸ್ವಚ್ಚತೆ ಕಾಪಾಡುವಂತೆ ತಿಳಿಸಿದರು.
ಇದೇ ಸಮಯದಲ್ಲಿ ಸಾರಿಗೆ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಪ್ರಾಧಿಕಾರದ ಉಪ ಕಾರ್ಯದರ್ಶಿ ಚಂದ್ರಶೇಖರ್,ವಿಭಾಗಿಯ ಸಂಚಲನ ಅಧಿಕಾರಿ ದಶರಥ್,ಇಂಜಿನಿಯರ್ ಮಹೇಶ್,ಪ್ರಾಧಿಕಾರ ಇಂಜಿನಿಯರ್ ಸೆಲ್ವ ಗಣಪತಿ,ಕೊಳ್ಳೇಗಾಲ ಬಸ್ ನಿಲ್ದಾಣ ಇಂಚಾರ್ಜ್ ಚರಣ್,ಮ.ಬೆಟ್ಟದ ಟಿಸಿ ಚಿನ್ನಪ್ಪ ಮುಖಂಡರುಗಳಾದ ಮಂಜೇಶ್ ಗೌಡ,ಡಿ.ಆರ್ ಮಾದೇಶ್,ಡಿಕೆ ರಾಜು,ಗೋಪಾಲ್ ನಾಯಕ,ವೆಂಕಟೇಶ್, ಸುರೇಶ್,ಡಿ.ಆರ್ ನವೀನ್,ಎಸ್.ಆರ್ ಮಹದೇವ್,ಹಾಗೂ ಇನ್ನಿತರರು ಉಪಸ್ಥಿತರಿದ್ದರು.



















