ತಳವಾರ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ..! ಯಾರು ಗೊತ್ತಾ..?
ವಿಜಯಪುರ : ತಾಲೂಕ ತಳವಾರ ಮಹಾಸಭಾ ಅಧ್ಯಕ್ಷ ಶಿವಪ್ಪ (ಶಿವು) ಗುರಕಾರ ಅವರು ತಾಲೂಕು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆನೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
.
ಆಲಮೇಲ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಸಮಾಜದ ಹಿರಿಯ ಮುಖಂಡ ಶರಣಪ್ಪ ಕಣ್ಮಶ್ವರ ಅವರು, ಆಲಮೇಲ ತಾಲ್ಲೂಕು ತಳವಾರ ಮಹಾಸಭಾದ ಅಧ್ಯಕ್ಷರಾಗಿ ನೇಮಿಸಿದ್ದರು. ನೇಮಕವಾದ ದಿನದಿಂದ ಈ ಸಂಘಟನೆಯಲ್ಲಿ ಬಹಳಷ್ಟು ನೀರಿಕ್ಷೆ ಇತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಎಕಪಕ್ಷೀಯ ನಿರ್ಧಾರಗಳು, ಪಧಾದಿಕಾರಿಗಳ ನಿರ್ಲಕ್ಷ್ಯ ಪ್ರಾಮಾಣಿಕವಾಗಿ ನೇರವಾಗಿ ಪ್ರಶ್ನೆ ಮಾಡಿದವರನ್ನು ಅವಮಾನ ಮಾಡುವುದು ಇವೆಲ್ಲವೂ ಗಮನಿಸುತ್ತಿದ್ದರೆ ಈ ಸಂಘಟನೆಯಲ್ಲಿ ಇದ್ದು ಸಮಾಜದ ಸೇವೆ ಸಾಧ್ಯವಿಲ್ಲವೆಂದು ಮನವರಿಕೆಯಾಗಿದೆ ಹೀಗಾಗಿ ಆಲಮೇಲ ತಾಲೂಕು ಎಲ್ಲಾ ಗ್ರಾಮದ ಯುವಕರು ಹಿರಿಯರು ಹಾಗೂ ಸಮಾಜದ ಬಾಂದವರ ಅಭಿಪ್ರಾಯ ಪಡೆದು ಆಲಮೇಲ ತಾಲೂಕು ತಳವಾರ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತ್ತಿದ್ದೆನೆ ಎಂದು ತಿಳಿಸಿದ್ದಾರೆ.



















