ಇಂಡಿ : ತಾಲ್ಲೂಕಿನ ಲಚ್ಯಾಣದಲ್ಲಿ ಮರಗಮ್ಮದೇವಿಯ ಜಾತ್ರೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಇದೇ ಜುಲೈ ೨೨ ರಂದು ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೫ ಗಂಟೆಗೆ ದೇವಸ್ಥಾನದಲ್ಲಿ ಭಕ್ತರಿಂದ ಅಭಿಷೇಕ , ವಿಶೇಷ ಪೂಜೆ ನಡೆಯಲಿದೆ. ಬಳಿಕ ೮ ಗಂಟೆಗೆ ದೇವಸ್ಥಾನದಿಂದ ಅಂಭಾಭವಾನಿ ದೇವಸ್ಥಾನ ಹಾಗೂ ಲಕ್ಷ್ಮಿದೇವಿ ದೇವಸ್ಥಾನ ವರೆಗೆ ಕುಂಭ ಮೆರವಣಿಗೆಯು ವಾದ್ಯಮೇಳದೊಂದಿಗೆ ವಿಜ್ರಂಭಣೆಯಿಂದ ನಡೆಯಲಿದೆ.
ಬಳಿಕ ಈ ಮೆರವಣಿಗೆಯು ಮೂಲ ದೇವಸ್ಥಾನ ತಲುಪಿದ ನಂತರ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಅನ್ನ ಪ್ರಸಾದ ವಿತರಿಸಲಾಗುವದು ಎಂದು ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಘಂಟೆಪ್ಪ ಐಹೋಳಿ ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.