ಕಚೇರಿಯಲ್ಲಿ ಸರಕಾರಿ ನೌಕರಸ್ಥರು ಯಾರೊ..! ಖಾಸಗಿ ವ್ಯಕ್ತಿಗಳು ಯಾರೊ..! ಕೆ ಆರ್ ಎಸ್ ಸಮಿತಿ
ಇಂಡಿ : ರೈತರು ಹಾಗೂ ಜನ ಸಾಮನ್ಯರು ಸರಕಾರಿ ಸೇವೆ ಪಡೆಯಲು ಹೋಗಿ ತಾಲೂಕು ಕಛೇರಿಯಲ್ಲಿ ಮೊಸ ಹೋಗುತ್ತಿದ್ದಾರೆ. ಕಾರಣ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಹುದ್ದೆಯ ನಾಮಫಲಕ ಮತ್ತು ಗುರುತಿನ ಚೀಟಿ (ಐಡಿ ಕಾರ್ಡ) ಧರಿಸದೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ರೈತರು ಮೊಸ ಹೋಗುತ್ತಿದ್ದಾರೆ. ಅದಲ್ಲದೇ ಸರಕಾರದ ಮಾರ್ಗಸೂಚಿ ಕೂಡಾ ಗಾಳಿಗೆ ತೂರಿದಂತಾಗಿದೆ. ಕೂಡಲೇ ತಪ್ಪಿಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಕೆ ಅರ್ ಸಮಿತಿ ಕಾರ್ಯಕರ್ತರು ತಹಶಿಲ್ದಾರ ಬಿ ಎಸ್ ಕಡಕಬಾವಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಮನವಿ ಸಲ್ಲಿಸಿ ಮಾತಾನಾಡಿದ ಕೆ ಆರ್ ಎಸ್ ಸಮಿತಿ ಜಿಲ್ಲಾ ಅಧ್ಯಕ‌್ಷ ಅಶೋಕ ಜಾಧವ ಅವರು, ಬಹುತೇಕವಾಗಿ ಗ್ರಾಮೀಣ ಭಾಗದ ಜನ ಸಾಮನ್ಯರು , ರೈತರು ಸರಕಾರಿ ಸೇವೆ ಪಡೆಯಲು ಕಛೇರಿ ಗೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಕಛೇರಿಯಲ್ಲಿ ಸಿಬ್ಬಂದಿ ವರ್ಗದವರು ಹಾಗೂ ಅಧಿಕಾರಿಗಳು ಐಡಿ ಕಾರ್ಡ ಮತ್ತು ಹುದ್ದೆಯ ನಾಮಫಲಕವೇ ಇರುವುದಿಲ್ಲ. ಆದುದರಿಂದ ಅಧಿಕಾರಿಗಳು ಯಾರೊ..! ಖಾಸಗಿ ವ್ಯಕ್ತಿಗಳು ಯಾರೊ..! ಗುತ್ತಿಗೆ ನೌಕರರು ಯಾರೊ..! ಹಾಗೂ ಕೆಟ್ಟ ಕೆಲಸ, ಮೊಸ ಮಾಡುವ ವ್ಯಕ್ತಿಗಳು ಯಾರೊ ಅನ್ನುವ ಆತಂಕದಲ್ಲಿಯೇ, ತಮ್ಮ ಸರಕಾರಿ ಸೇವೆ ಪಡೆಯಲು ಹೋಗಿ ಹಣ ಕೊಟ್ಟು ಮೊಸ ಹೋಗುತ್ತಿದ್ದಾರೆ. ಅದಲ್ಲದೇ ಐಡಿ ಕಾರ್ಡ ಇಲ್ಲದ ಕಾರಣ ಕೆಟ್ಟ ಕೆಲಸ ಮೊಸ ಮಾಡುವ ವ್ಯಕ್ತಿಗಳಿಗೆ ಸಹಕಾರವಾಗುತ್ತಿದೆ. ಕೂಡಲೇ ಸರಕಾರದ ಮಾರ್ಗ ಸೂಚಿ ಮತ್ತು ನಿಯಮದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹುದ್ದೆಯ ನಾಮಫಲಕ ಮತ್ತು ಗುರುತಿನ ಚೀಟಿ ಧರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದ್ರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಕೆ ಆರ್ ಎಸ್ ಸಮಿತಿಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ ಆರ್ ಎಸ್ ಸಮಿತಿ ತಾಲೂಕು ಅಧ್ಯಕ್ಷ ಗಣಪತಿ ರಾಠೋಡ, ಪ್ರ.ಕಾ. ಲಕ್ಷ್ಮಣ ಚಡಚಣ, ಉಪಾಧ್ಯಕ್ಷ ಮಲ್ಲಿಕಾರ್ಜುನ ಬಿರಾದಾರ, ಭೀಮಾಶಂಕರ ಕಾಂಬಳೆ, ರೈತ ಘಟಕದ ಅಧ್ಯಕ್ಷ ಸುರೇಶ ನಿಂಬೊಣಿ ಜೊತೆಗೆ ಇನ್ನೂ ಕಾರ್ಯಕರ್ತರು ಉಪಸ್ಥಿತರಿದ್ದರು.