ಇಂಡಿ : ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಆದೇಶದ ಮೇರೆಗೆ ಡಾ. ಮಹೇಶ್ ಷಣ್ಮುಖ ಗಾಯಕವಾಡರನ್ನು ವಿಜಯಪುರ ಜಿಲ್ಲೆಯ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿಲಾಗಿದೆ. ರಾಜ್ಯ ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷರಾದ ಡಾ ಮಧುಸೂಧನ್ ಅವರು ಆದೇಶ ಹೊರಡಿಸಿದ್ದಾರೆ. ಈ ಸಂದರ್ಭದಲ್ಲಿ ಇಂಗಳಗಿ ಗ್ರಾಮದ ಮುನೀರ ಮೊ ಚಡಚಣಕರ ಮತ್ತು ಶರಣಬಸಪ್ಪ ನಾ ಬನಸೋಡೆ ಉಪಸ್ಥಿತರಿದ್ದರು.