ಮುಂಬೈ: ಕೆಕೆಆರ್ ವಿರುದ್ಧ ಎಸ್ ಆರ್ ಹೆಚ್ ಭರ್ಜರಿ ಗೆಲುವು ಸಾಧಿಸಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ನಡೆದ ಐಪಿಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಅಯ್ಯರ್ ತಂಡ 8 ವಿಕೆಟ್ಗಳ ನಷ್ಟಕ್ಕೆ 175 ರನ್ ಗಳಿಸಿತು. 3 ವಿಕೇಟ್ ಕಳೆದುಕೊಂಡ ಹೈದ್ರಾಬಾದ್ ತಂಡ 175 ರನ್ ಗುರಿ ಬೆನ್ನಟ್ಟಿ ಗೆಲುವಿನ ನಗೆ ಬೀರಿದೆ. ರಾಹುಲ್ ತ್ರಿಪಾಠಿ (71) ಐಡೆನ್ ಮಾರ್ಕ್ರಾಮ್ (68*) ಬ್ಯಾಟಿಂಗ್ನಿಂದಾಗಿ 17. 5 ಓವರ್ಗಳಲ್ಲಿ ಗೆಲುವು ಸಾಧಿಸಿದೆ.