ವಿದ್ಯಾಭ್ಯಾಸದ ಜೊತೆಗೆ ದೈಹಿಕವಾಗಿ ಹಾಗೂ ಸದೃಢರಾಗಿರಲು ಕರಾಟೆ ತರಬೇತಿ ಅವಶ್ಯಕ: ಶಾಸಕ ಎಂ.ಆರ್ ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ
ಹನೂರು:ಗುರು ಪರಶುರಾಮ ಕರಾಟೆ ಅಕಾಡೆಮಿಯಿಂದ ವತಿಯಿಂದ ಆಯೋಜಿಸಿದ್ಧ ಕರಾಟೆ ಕಲೆಯಲ್ಲಿ ಪ್ರಾವೀಣ್ಯತೆ ಮತ್ತು ಉತ್ತಮ ಕೌಶಲ್ಯವನ್ನು ಪ್ರದರ್ಶಿಸಿದ ಮಕ್ಕಳಿಗೆ ಬೆಲ್ಟ್ ಗ್ರೇಡ್ ಪ್ರಮಾಣಪತ್ರವನ್ನು ಶಾಸಕ ಎಂ ಆರ್ ಮಂಜುನಾಥ್ ವಿತರಣೆ ಮಾಡಿದರು.
ಶಾಸಕ ಎಂಆರ್ ಮಂಜುನಾಥ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ವಿದ್ಯಾಭ್ಯಾಸ ಸೇರಿದಂತೆ ಕ್ರೀಡಾ ಚಟುವಟಿಕೆಗಳಲ್ಲಿ ಗುರಿ ಇರಬೇಕು. ಆಗಿದ್ದರೆ ಮಾತ್ರ ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಬಹುದು.
ನಗರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ತರಬೇತಿಗಳು ಅಕಾಡೆಮಿಗಳು ಇರುತ್ತದೆ. ಅದೇ ರೀತಿ ಹನೂರು ಪಟ್ಟಣ ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುರು ಪರಶುರಾಮ ಕರಾಟೆ ಅಕಾಡೆಮಿ ವತಿಯಿಂದ ಕರಾಟೆ ತರಬೇತಿ ನೀಡುತ್ತಿರುವುದು ಸಂತಸದ ವಿಚಾರ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಹೊರೆ ತರುವ ನಿಟ್ಟಿನಲ್ಲಿ ತರಬೇತಿಗಳು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಕಳೆದ ಹಲವು ವರ್ಷಗಳಿಂದ ಗುರು ಪರಶುರಾಮ್ ಕರಾಟೆ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಕರಾಟೆ ಮಾಸ್ಟರ್ ರಮೇಶ್ ಮಾತನಾಡಿ ಈ ಪರೀಕ್ಷೆಯಲ್ಲಿ ಒಟ್ಟು 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಆರು ಬಿಲ್ಟ್ ಪರೀಕ್ಷೆಗಳಾದ ಎಲ್ಲೋ ಬೆಲ್ಟ್, ಆರೆಂಜ್ ಬೆಲ್ಟ್, ಗ್ರೀನ್ ಬೆಲ್ಟ್, ಬ್ಲೂ ಬೆಲ್ಟ್, ಪರ್ಪಲ್ ಬೆಲ್ಟ್, ಮತ್ತು ಬ್ರೌನ್ ಬೆಲ್ಟ್ ಪರೀಕ್ಷೆಗಳು ನಡೆದಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತಮವಾಗಿ ಪ್ರದರ್ಶನವನ್ನು ನೀಡಿದ್ದಾರೆ. ಶಾಸಕರಾದ ಎಂ ಆರ್ ಮಂಜುನಾಥ್ ಸರ್ ಅವರು ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದು ನನಗೆ ಸಂತೋಷವನ್ನುಂಟು ಮಾಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ,ಪಟ್ಟಣ ಪಂಚಾಯಿತಿ ಸದಸ್ಯರಾದ ಪವಿತ್ರ ಪ್ರಸನ್ನ,ಮಹೇಶ್,ಮುಖಂಡರುಗಳಾದ ಜಿಸಿಮ್ ಪಾಷ, ಸತ್ತೇಗಾಳ ಮಂಜು, ಜಾವದ್,ರೈತ ಮುಖಂಡ ಮಾದಪ್ಪ,ಎಸ್ ಆರ್ ಮಹದೇವ್,ರಾಜಣ್ಣ,
ಅಮೀನ್,ಸವಕೈಯ್ಯ,ಹಾಗೂ ಇನ್ನಿತರರು ಉಪಸ್ಥಿತರಿದ್ದರು..



















