ಸಹಾಯಕ ಹುದ್ದೆಗೆ ಅರ್ಜಿ ಅಹ್ವಾನ
Voice Of Janata : ಬೆಳಗಾವಿ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಗುತ್ತಿಗೆ ಆಧಾರದ ಮೇಲೆ ಕಾರ್ಯಾಲಯ ಸಹಾಯಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಕಂಪ್ಯೂಟರ್ ಎಮ್ ಎಸ್ ಆಫೀಸ್, ಇಂಟರ್ನೆಟ್ ಜ್ಞಾನ ಹೊಂದಿರಬೇಕು, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಕಡ್ಡಾಯವಾಗಿದ್ದು, ಅಕೌಂಟಿಂಗ್ ಜ್ಞಾನ ಹೊಂದಿರಬೇಕು. ಉತ್ತಮ ಸಂವಹನ ಕಲೆ ಹೊಂದಿರವವರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಓದಲು, ಬರೆಯಲು ಬರುವವರು ಅರ್ಜಿಸಲ್ಲಿಸಬಹುದು. ಹಿಂದಿ ಭಾಷೆ ಹೆಚ್ಚಿನ ಜ್ಞಾನ ಹೊಂದಿರಬೇಕು. ಆರ್‌ಸೆಟಿ/ರುಡ್‌ಸೆಟಿಗಳಂಥ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವವಿದ್ದಲ್ಲಿ ವಿಶೇಷ ಮನ್ನಣೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಜೊತೆಗೆ ಒಂದು ಇತ್ತೀಚಿನ ಭಾವಚಿತ್ರದೊಂದಿಗೆ ಅರ್ಜಿಯನ್ನು ಸ್ವ-ಅಕ್ಷರದಲ್ಲಿ ಬರೆದು ಅಥವಾ ಟೈಪ್ ಮಾಡಿರಬೇಕು. ಅರ್ಜಿಯಲ್ಲಿ ಅನುಭವ, ಈಗ ಮಾಡುತ್ತಿರುವ ಉದ್ಯೋಗದ ವಿವರದೊಂದಿಗೆ ತಮ್ಮ ಸ್ವ-ವಿಳಾಸ ಅಂಚೆ ಚೀಟಿ ಲಗತ್ತಿಸಿದ ಲಕೋಟೆಯೊಂದಿಗೆ ಫೆ.28ರ ಒಳಗಾಗಿ ಸಲ್ಲಿಸಬೇಕು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಪ್ಲಾಟ್ ನಂ. ಸಿಎ-03 ಆಪ್ ಕಣಬರ್ಗಿ ಇಂಡಸ್ಟ್ರೀಯಲ್ ಏರಿಯಾ ಆಟೋ ನಗರ ಇಲ್ಲಿಗೆ ಅಥವಾ ದೂರವಾಣಿ 0831-2440644 ಸಂಖ್ಯೆಗೆ ಸಂಪರ್ಕಿಸಬಹುದು.