ಪ್ಲಾಸ್ಟಿಕ್ ಮುಕ್ತ ಗ್ರಾಮ ಮಾಡಲು ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಕೈ ಜೋಡಿಸುವುದು ಅವಶ್ಯಕ..!
ಇಂಡಿ: ಇಂದು ಬಹುತೇಕ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಪ್ಲಾಸ್ಟಿಕ್, ಬಾಳೆ, ಇತರ ಕಸಗಳಿಂದ ಪರಿಸರ ಮಲೀನವಾಗಿ ಅನೇಕ ರೋಗಗಳಿಗೆ ಕಾರಣವಾಗುತ್ತಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಜಂಬಗಿ ಹೇಳಿದರು.
ಅವರು ಶನಿವಾರ ಇಂಡಿ ತಾಲ್ಲೂಕಿನ ಸೊನಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಜರುಗಿದ ” ಸ್ವಚ್ಛತಾ ಜಾಗೃತಿ ಜಾಥಾ” ಮೂಲಕ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢ ಶಾಲೆ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪರಿಸರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕಿದೆ. ಪ್ಲಾಸ್ಟಿಕ್ ಮುಕ್ತ ಗ್ರಾಮ, ಶಾಲೆ ಮಾಡಲು ಸಮುದಾಯ, ಜನಪ್ರತಿನಿಧಿಗಳು ಕೈ ಜೋಡಿಸಿಬೇಕಿದೆ ಎಂದರು.
ರೋಗಗಳು ಹರಡುವುದು ನಮ್ಮ ಸುತ್ತಲೀನ ಕೊಳಚೆಯಲ್ಲಿ, ಇದನ್ನು ಸ್ವಚ್ಛತೆ ಮಾಡುವುದು ಕೇವಲ ಪೌರ ಕಾರ್ಮಿಕರದಲ್ಲ. ಎಲ್ಲರೂ ಹಸಿ ಕಸ, ಒಣ ಕಸ ವಿಂಗಡಿಸಿ ಸರಿಯಾಗಿ ವಿಲೇವಾರಿ ಮಾಡಬೇಕು ಎಂದರು.
ಮುಖ್ಯ ಗುರುಮಾತೆ ಎಸ್. ಬಿ. ಚಿತ್ತವಾಡಗಿ, ಅವರು ಸ್ವಚ್ಛತೆ ಯ ಪ್ರಮಾಣ ವಚನ ಬೋಧಿಸಿದರು. ಶಿಕ್ಷಕರು, ಗ್ರಾಮದ ಪ್ರಮುಖರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಇಂಡಿ: ಶನಿವಾರ ಇಂಡಿ ತಾಲ್ಲೂಕಿನ ಸೊನಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಜರುಗಿದ ” ಸ್ವಚ್ಛತಾ ಜಾಗೃತಿ ಜಾಥಾ” ದಲ್ಲಿ ಮಕ್ಕಳು ಶಾಲಾ ಆವರಣ ಸ್ವಛ್ಛತೆ ಮಾಡುತ್ತಿರುವುದು.



















