Voice Of Janata SPORTS NEWS : IPL 2024:
RCB VS CSK
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಚೆನ್ನೈನಲ್ಲಿ ಭರ್ಜರಿ ಸದ್ಧತೆಯಲ್ಲಿ ತೊಡಗಿಕೊಂಡಿದೆ. ಈ ಹಿಂದಿನಂತೆ RCB ತಂಡವು ಬ್ಯಾಟಿಂಗ್ ಕ್ರಮಾಂಕದಲ್ಲಿ ಅತ್ಯಂತ ಬಲಿಷ್ಠವಾಗಿದೆ. ಇತ್ತ ಚೆನ್ನೈ ತಂಡ ಸಹ ಭರ್ಜರಿ ತಯಾರಿ ಆರಂಭಿಸಿದ್ದು, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್.
ಬಹುನಿರೀಕ್ಷಿತ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ 17ನೇ ಸೀಸನ್ ಆರಂಭಕ್ಕೆ ಇನ್ನೋಂದೇ ದಿನ ಬಾಕಿ ಉಳಿದಿದೆ. ಇದೇ ಮಾರ್ಚ್ 22ರಿಂದ ಐಪಿಎಲ್ 2024 ಅದ್ಧೂರಿಯಾಗಿ ಆರಂಭವಾಗಲಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಯಲಿದ್ದು, ಮೊದಲ ಪಂದ್ಯದಲ್ಲಿಯೇ ಐಪಿಎಲ್ನ ಬದ್ಧ ಎದುರಾಳಿಗಳು ಮುಖಾಮುಖಿ ಆಗಲಿದ್ದಾರೆ.
CSK ಸಂಭಾವ್ಯ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್, ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಎಂಎಸ್ ಧೋನಿ (C & WK), ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಮುಕೇಶ್ ಚೌದ್ರಿ
RCB ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (C), ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಕರಣ್ ಶರ್ಮಾ, ಅಲ್ಜಾರಿ ಜೋಸೆಫ್, ಮೊಹಮ್‌ಮದ್ ಸಿರಾಜ್, ಆಕಾಶದೀಪ್
ದಿನಾಂಕ : 22 ಮಾರ್ಚ 2024
ಸ್ಥಳ : ಎಮ್ ಚಿದಂಬರಂ ಕ್ರೀಡಾಂಗಣ ಚನೈ
ಸಮಯ : 8 PM