Voice Of Janata Sports NEWS : IPL 2024:
ಆರ್ ಸಿ ಬಿ ಹಾಗೂ ಪಿಬಿಕೆಸ್ ಬಿಗ್ ಪೈಟ್ ಇಂದು
DESK NEWS : 17ನೇ ಆವೃತ್ತಿಯ ಐಪಿಎಲ್ ಟೂರ್ನಿ (IPL 2024) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಲೀಗ್ನ ಮತ್ತೊಂದು ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಜ್ಜಾಗಿದ್ದು, 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು (Royal Challengers Bengaluru vs Punjab Kings) ರೋಚಕ ಕಾದಾಟಕ್ಕೆ ಸಜ್ಜಾಗಿವೆ. ಎರಡು ಬಲಿಷ್ಠ ತಂಡಗಳ ಸೆಣಸಾಟಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ.
ಈ ಪಂದ್ಯಕ್ಕೆ ಎರಡೂ ತಂಡಗಳ ಪ್ಲೇಯಿಂಗ್ 11 ಹೇಗಿರಲಿದೆ ಎಂಬುದನ್ನು ನೋಡುವುದಾದರೆ.. ಗೆಲುವಿನ ಲಯದಲ್ಲಿರುವ ಪಂಜಾಬ್ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರುವ ಸಾಧ್ಯತೆಗಳಿಲ್ಲ. ಆದರೆ ಸೋಲಿನೊಂದಿಗೆ ಟೂರ್ನಿ ಆರಂಭಿಸಿರುವ ಆರ್‌ಸಿಬಿ ತನ್ನ ಪ್ಲೇಯಿಂಗ್ 11 ಬದಲಾವಣೆ ಮಾಡುವ ನಿರೀಕ್ಷೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮರೂನ್ ಗ್ರೀನ್, ಅನೂಜ್ ರಾವತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಅಲ್ಜಾರಿ ಜೋಸೆಫ್, ಮಯಾಂಕ್ ಡಾಗರ್, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್.
ಇಂಪ್ಯಾಕ್ಟ್ ಪ್ಲೇಯರ್ – ಯಶ್ ದಯಾಳ್ (ದಿನೇಶ್ ಕಾರ್ತಿಕ್ಗೆ)
ಪಂಜಾಬ್ ಕಿಂಗ್ಸ್ ಸಂಭಾವ್ಯ ತಂಡ
ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋ, ಪ್ರಭುಸಿಮ್ರಾನ್ ಸಿಂಗ್, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟನ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೋ ರಬಾಡ, ರಾಹುಲ್ ಚಹರ್
ಇಂಪ್ಯಾಕ್ಟ್ ಪ್ಲೇಯರ್ – ಪ್ರಭುಸಿಮ್ರನ್ ಸಿಂಗ್ ಬದಲಿಗೆ ಅರ್ಷದೀಪ್ ಸಿಂಗ್
ಸಮಯ : 7:30 PM
ಸ್ಥಳ : 25 ಮಾರ್ಚ 2024
ದಿನಾಂಕ :ಚಿನ್ನಸ್ವಾಮಿ ಮೈದಾನ ಬೆಂಗಳೂರು