Voice Of Janata : Sports News :IPL 2024
IPL 2024 ಲಕ್ನೋ ಸ್ಪೋಟಕ ಬ್ಯಾಟಿಂಗ್, 21 ರನಗಳ ಜಯ
DESK NEWS : ಲಖನೌಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ 21 ರನ್‌ಗಳ ಗೆಲುವು ದಾಖಲಿಸಿದೆ. ಪ್ರಸ್ತುತ ಪಂದ್ಯಾವಳಿಯಲ್ಲಿ ಇದು ಲಖನೌ ತಂಡದ ಮೊದಲ ಗೆಲುವಾಗಿದೆ.
ಲಖನೌ ನೀಡಿದ್ದ 200 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 178 ರನ್ ಗಳಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಲಖನೌ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ ಅವರ 54, ನಿಕೊಲಸ್ ಪೂರನ್ ಗಳಿಸಿದ 42 ಮತ್ತು ಆಯುಶ್ ಬದೋನಿ ಸಿಡಿಸಿದ ಅಜೇಯ 43 ರನ್ ನೆರವಿನಿಂದ 199 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು. ಪಂಜಾಬ್ ಪರ ಸ್ಯಾಮ್ ಕರನ್ 3 ವಿಕೆಟ್ ಪಡೆದರು.
ಸವಾಲಿನ ಮೊತ್ತ ಬೆನ್ನತ್ತಿದ ಪಂಜಾಬ್‌ಗೆ ನಾಯಕ ಶಿಖರ್ ಧವನ್ 72 ಮತ್ತು ಜಾನಿ ಬೆಸ್ಟೋ 42 ರನ್ ಸಿಡಿಸಿ ಉತ್ತಮ ಆರಂಭ ನೀಡಿದರಾದರೂ ನಂತರ ಬಂದ ಬ್ಯಾಟರ್ ಅದನ್ನು ಮುಂದುವರಿಸಲು ವಿಫಲವಾಗಿದ್ದರಿಂದ ತಂಡಕ್ಕೆ ಸೋಲಾಯಿತು.