Voice of janata Sports NEWS :
IPl 2024: KKR Vs SHR
ಕೋಲ್ಕತಾ: 17 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024ರ 3ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಇಂದು ಸಾಯಂಕಾಲ ಮುಖಾಮುಖಿಯಾಗಲಿವೆ. ಎರಡೂ ತಂಡಗಳಿಗೆ ಇದು ಋತುವಿನ ಮೊದಲ ಪಂದ್ಯವಾಗಿದ್ದು, ಅವರು ತಮ್ಮ ಅಭಿಯಾನವನ್ನು ಭರ್ಜರಿಯಾಗಿ ಪ್ರಾರಂಭಿಸಲು ಎದುರು ನೋಡುತ್ತಿದ್ದಾರೆ.
2023 ರ ಆವೃತ್ತಿಯ ಪಂದ್ಯದಲ್ಲಿ ಕೆಕೆಆರ್ ತನ್ನ ಅಭಿಯಾನವನ್ನು ಏಳನೇ ಸ್ಥಾನದಲ್ಲಿ ಕೊನೆಗೊಳಿಸಿತು. ಪ್ಲೇಆಫ್ ಸ್ಥಾನಗಳಿಗಿಂತ ನಾಲ್ಕು ಸ್ಥಾನಗಳು ಹಿಂದೆ ಬಿದ್ದಿತು. ಆದರೆ ಸನ್ರೈಸರ್ಸ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. 2023 ರಲ್ಲಿ ಕೆಕೆಆರ್ನ ಪ್ರದರ್ಶನವು ಕಳಪೆಯಾಗಿತ್ತು ಆದರೆ ಅವರು 2024 ರ ಋತುವಿಗೆ ತಂಡವನ್ನು ಬಲುವಾಗಿ ಕಟ್ಟಿದ್ದಾರೆ. ಕಾದು ನೋಡಬೇಕು ಈ ತಂಡದ ಆಟವನ್ನು..? ಈ ಋತುವಿನ ಮೊದಲ ಪಂದ್ಯದಿಂದ ತನ್ನ ಕೊನೆಯ ಪಂದ್ಯದವರೆಗೆ ಪ್ರದರ್ಶನ ಬಗ್ಗೆ..
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಕೋಲ್ಕತಾ ನೈಟ್ ರೈಡರ್ಸ್: ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಮಿಚೆಲ್ ಸ್ಟಾರ್ಕ್, ಚೇತನ್ ಸಕಾರಿಯಾ, ವರುಣ್ ಚಕ್ರವರ್ತಿ, ವೈಭವ್ ಅರೋರಾ.
ಸನ್ರೈಸರ್ಸ್ ಹೈದರಾಬಾದ್:
ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ರಾಹುಲ್ ತ್ರಿಪಾಠಿ, ಹೆನ್ರಿಕ್ ಕ್ಲಾಸೆನ್ (ವಿಕೆ), ಉಪೇಂದ್ರ ಯಾದವ್, ಪ್ಯಾಟ್ ಕಮಿನ್ಸ್ (ನಾಯಕ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಉಮ್ರಾನ್ ಮಲಿಕ್.
ಐಪಿಎಲ್ 2024:
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿ
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕತಾ
ದಿನಾಂಕ ಮತ್ತು ಸಮಯ: ಶನಿವಾರ, ಮಾರ್ಚ್ 23, ಸಂಜೆ 7:30 (ಭಾರತೀಯ ಕಾಲಮಾನ)
ನೇರ ಪ್ರಸಾರ ವಿವರಗಳು: ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಗಳು, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್