ನಷ್ಟಗೊಂಡ ಈರುಳ್ಳಿ ಬೆಳೆ ವಿಕ್ಷಣೆ ಮಾಡಿದ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಪಾಟೀಲ
ಕಳಪೆ ಮಟ್ಟದ ಈರುಳ್ಳಿ ಬೀಜದಿಂದಾಗಿ ನಷ್ಟಗೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ವಿಜಯಪುರ : ಕಳಪೆ ಮಟ್ಟದ ಈರುಳ್ಳಿ ಬೀಜದಿಂದಾಗಿ ನಷ್ಟಗೊಂಡ ರೈತರ ಜಮೀನಿಗೆ ತೋಟಗಾರಿಕಾ ಅಧಿಕಾರಿಗಳು ಬೇಟಿ ನೀಡಿ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಶಾಂಪಲ್ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ರೈತ ಕುಟುಂಬಕ್ಕೆ ಧೈರ್ಯ ತುಂಬಿದ ಬಸನಗೌಡ ಪಾಟೀಲ, ವಿಜಯಪುರ ತಾಲೂಕಿನ ಅಂಕಲಗಿ ಗ್ರಾಮದ ಶ್ರೀಮತಿ ಶಾರವ್ವ ಗುರಪ್ಪ ತಳವಾರ ಸರ್ವೇ ನಂ ೭೫/೫ ಒಟ್ಟು ೪ ಎಕರೆ ಪ್ರದೇಶದಲ್ಲಿ ಕಳಶ ಸಿಡ್ಸ್ ಕಂಪನಿಯ ಸಂಗಮ ಸೆಲೆಕ್ಷನ ಈರುಳ್ಳಿ ಬೀಜವನ್ನು ಬಿತ್ತನೆ ಮಾಡಿ ಇನ್ನೆನು ೧೫ ದಿನಗಳಲ್ಲಿ ಬೆಳೆ ಫಸಲಿಗೆ ಬರುವ ವೇಳೆ ಈರುಳ್ಳಿ ಬೇರು ಕೆಳಗೆ ಹೋಗಿ ಉಳಿದಿರುವ ಗಡ್ಡಿ ಮೇಲೆ ಬಂದು ಸಂಪೂರ್ಣ ನಷ್ಟಗೊಂಡಿದೆ ಇದರಿಂದಾಗಿ ರೈತ ಸುಮಾರು ೫-೬ ಲಕ್ಷ ನಷ್ಟ ಅನುಭವಿಸುವಂತಾಗಿದೆ ಕೂಡಲೇ ಆ ಈರುಳ್ಳಿ ಬೀಜದ ಕಂಪನಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಷ್ಟ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಾಸಿರು ಸೇನೆ ಮನವಿ ಸಲ್ಲಿಸಿರುವ ಮೇರೆಗೆ ಅಧಿಕಾರಿಗಳು ಜಮೀನಿಗೆ ಬೇಟಿ ನೀಡಿದರು.
ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕರಾದ ಬಸನಗೌಡ ಬಿರಾದಾರ, ಸಹಾಯಕ ನಿರ್ದೇಶಕರಾದ ಅನುಸೂಯಾ ಸೋಮಣ್ಣವರ ಹಾಗೂ ಸಹಾಯಕ ಅಧಿಕಾರಿಗಳಾದ ರಮೇಶ ಮಿರ್ಜಿ ತಂಡದೊAದಿಗೆ ಜಮೀನಿಗೆ ಆಗಮಿಸಿ ವಿಕ್ಷಣೆ ಮಾಡಿ ಶಾಂಪಲ್ ಸಂಗ್ರಹಿಸಿಕೊAಡು ಬಾಗಲಕೋಟ ತೋಟಗಾರಿಕಾ ಇಲಾಖೆಯ ವಿಜ್ಞಾನಿಗಳನ್ನು ಕರೆಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಎತಕ್ಕಾಗಿ ಇದಾಗಿದೆ ಎಂದು ಕುಲಂಕುಷವಾಗಿ ನೋಡಿ ಒಂದು ನಿರ್ಣಯಕ್ಕೆ ಬರಬೇಕಾಗುತ್ತದೆ ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಹಾಗೂ ತಾಲೂಕಾ ಸಂಚಾಲಕರಾದ ರಾಜೇಸಾ ಅಂಕಲಗಿ ಮಾತನಾಡುತ್ತಾ ಒಟ್ಟಾರೆಯಾಗಿ ೫-೬ ಲಕ್ಷ ನಷ್ಟಗೊಂಡ ರೈತ ಕುಟುಂಬಕ್ಕೆ ಬೀಜದ ಕಂಪನಿಯಿAದ ಪರಿಹಾರ ನೀಡುವಂತೆ ಆಗ್ರಹ ಮಾಡಬೇಕು ಜೊತೆಗೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಿ ಇಲ್ಲವಾದಲ್ಲಿ ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಅಥವಾ ಸರಕಾರದಿಂದ ಆದರೂ ಆ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೆವೆ ಇಲ್ಲವಾದಲ್ಲಿ ಆ ಕುಟುಂಬದೊAದಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸುತ್ತೆವೆ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕರಾದ ಜಕರಾಯ ಪೂಜಾರಿ, ಅಂಕಲಗಿ ಗ್ರಾಮ ಘಟಕದ ಅಧ್ಯಕ್ಷರಾದ ಅಮೋಗಿ ಉಕ್ಕಲಿ, ಗುರಪ್ಪ ತಳವಾರ, ಕಲ್ಲಪ್ಪ ಇಂಡಿ, ಬಸಪ್ಪ ಮೋಪಗಾರ, ಸಾಬು ಪೂಜಾರಿ, ಅಜೀಜಪಟೇಲ ಪಾಟೀಲ, ತೌಸೀಪ್ ಮುಲ್ಲಾ, ಬೀರಪ್ಪ ದಿಂಡವಾರ, ಚಂದ್ರಯ್ಯ ಹಿರೇಮಠ, ನಬಿಪಟೇಲ ಬಿರಾದಾರ, ಮಹಿಬೂಬ ನದಾಫ, ಸಿದ್ದಪ್ಪ ದಿಂಡವಾರ, ಗಪೂರ ಪಟೇಲ್, ಬಸವರಾಜ ತಳವಾರ, ಶರಣಪ್ಪ ಪಡನೂರ, ಸೇರಿದಂತೆ ಇತರರು ಇದ್ದರು.



















