ಇಂಡಿ : ಹಿಜಾಬ್, ಸಿಂಧೂರ ವಿವಾದ ಹಿನ್ನಲೆಯಲ್ಲಿ ತರಗತಿಯಿಂದ ಹೋರಗುಳಿದ ಡಿಗ್ರಿ ಕಾಲೇಜು ವಿಧ್ಯಾರ್ಥಿಗಳಿದ್ದಾರೆ. ಪಟ್ಟಣ ಜಿ.ಆರ್.ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ 10 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಆಗಮಿಸಿದ್ರೆ, ಸರಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಣೆಗೆ ಸಿಂಧೂರ (ಕುಂಕುಮ) ಹಚ್ಚಿಕೊಂಡ ಬಂದ ಘಟನೆ, ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಅದರಂತೆ ಇದನ್ನ ಗಮನಿಸಿದ ಎರಡೂ ಕಾಲೇಜಿನ ಉಪನ್ಯಾಸಕ, ಪ್ರಾಚಾರ್ಯರು ಮತ್ತು ಆಡಳಿತ ಮಂಡಳಿಯವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಸರಕಾರ ಸೂಚಿಸಿದ ನಿಯಮದಂತೆ ಆಗಮಿಸಬೇಕು ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ವಿವಾದ ಗಮನಕ್ಕೆ ಬರುತ್ತಿದ್ದಂತೆಯೇ ನಗರ ಸಿಪಿಐ ಭೀಮನಗೌಡ ಬಿರಾದಾರ ಬೇಟಿ ನೀಡಿ ಸೂಕ್ತವಾದ ಬಂದೋಬಸ್ತ್ ಒದಗಿಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.