ಇಂಡಿ | ಭಗೀರಥ ಮಹರ್ಷಿ ಜಯಂತಿ ಪೂರ್ವಭಾವಿ ಸಭೆ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ..!
ಇಂಡಿ : ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಬೆಳ್ಳಿಹಳ್ಳ ವಸ್ತಿಯ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಏ- 20 ಬೆಳಿಗ್ಗೆ 11 ಘಂಟೆಗೆ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಭಗೀರಥ ಮಹರ್ಷಿ (ಉಪ್ಪಾರ) ತಾಲ್ಲೂಕು ಸಂಘದ ಅಧ್ಯಕ್ಷ ಸುರೇಶ ಕರಂಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಗೀರಥ ಮಹರ್ಷಿ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಭಾರತ ಕಂಡ ಮಹಾನ್ ಚಕ್ರವರ್ತಿಗಳಲ್ಲಿ ಸಗರ ಚಕ್ರವರ್ತಿಯ ವಂಶದ ಭಗೀರಥ ಮಹರ್ಷಿಯು ತನ್ನ ಘೋರ ತಪಸ್ಸಿನಿಂದ ಗಂಗೆಯನ್ನು ಭೂಮಿಗೆ ತಂದ ಮಹಾನ್ ಶಕ್ತಿ. ಆ ಕಾರಣಕ್ಕಾಗಿ ಉಪ್ಪಾರ ಸಮಾಜದ ರಾಜಕೀಯ ಮುಖಂಡರು, ಯುವ ನಾಯಕರು, ಸಮಾಜದ ಚಿಂತಕರು, ಮಹಿಳಾ ಸಂಘದ ಪದಾಧಿಕಾರಿಗಳು, ಅಭಿಮಾನಿಗಳು ಸೇರಿದಂತೆ ಎಲ್ಲರೂ ಭಾಗವಹಸಿ ತಮ್ಮ ಸಲಹೆ ಸೂಚನೆ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊಂಡಿದ್ದಾರೆ.



















