ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖ ವ್ಯಾಪ್ತಿಯ ನಗರದ ಕನಕದಾಸ ಬಿ.ಡಿ.ಎ ಲೇಔಟನಲ್ಲಿ ನೂತನವಾಗಿ ನಿರ್ಮಿಸಲಾದ 3 ಕೋಟಿ 25 ಲಕ್ಷ ವೆಚ್ಚದ ಈಜುಕೊಳ (ಸ್ವಿಮ್ಮಿಂಗ್ ಪೂಲ್) ವನ್ನು ನಗರ ಶಾಸಕರಾದ ಶ್ರೀ ಬಸನಗೌಡ ಪಾಟೀಲ (ಯತ್ನಾಳ್) ಇಂದು ಉದ್ಘಾಟಿಸಿದರು.
ಈಜುಕೊಳ(ಸ್ವಿಮ್ಮಿಂಗ್ ಪೂಲ್) ವೀಕ್ಷಿಸಿ, ಸ್ವತ: ಈಜುವ ಮೂಲಕ ಈಜುಪಟುಗಳಿಗೆ ಪ್ರೋತ್ಸಾಹವನ್ನು ಶಾಸಕರು ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ಅಜುರೆ, ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಸ್.ಜಿ. ಲೋಣಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವ್ಯವಸ್ಥಾಪಕರು, ಎನ್.ಎ. ನದಾಫ, ಈಜು ಕೊಳದ ವ್ಯವಸ್ಥಾಪಕರು ಮುತ್ತಮ್ಮ ಪಾಟೋಳೆ, ಕ್ರೀಡಾ ಈಜುಗಾರರಾದ ಅಭಿಷೇಕ್ ಮಠಪತಿ, ಮಲ್ಲಿಕಾರ್ಜುನ ಬಿರಾದಾರ, ಸಂಜೀವ ಬಂಡಗಾರ, ಅಭಿಷೇಕ್ ಜೆವುರ, ಸುಧಾಕರ ಜೆವುರ, ಶರಣು ಕೊಲಶೆಟ್ಟಿ, ಯುವ ಕ್ರೀಡಾ ಪಟುಗಳಾದ ಶೃತಿ.ಎಲ್.ಪಾಟೀಲ, ಪ್ರೇಮಾ ಮೂಲಿಮನಿ,ರೂಪಾ ಅರಮೋಟಿ,ಅನು ಜಮಖಂಡಿ, ಭಾಗ್ಯಶ್ರೀ ಬನಸೋಡೆ, ಅಭಿಷೇಕ, ಸಾಗರ, ಭಾಗ್ಯವಂತ, ದಿನೇಶ ಉಪಸ್ಥಿತರಿದ್ದರು.