ಇಂಡಿ : ಅಕ್ರಮವಾಗಿ ಮದ್ಯ ಸಂಗ್ರಹಿಸಿದ ಮನೆಯ ಮೇಲೆ ಅಬಕಾರಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಡಲಸಂಗ ಗ್ರಾಮದಲ್ಲಿ ಶನಿವಾರ ನಡೆದಿದೆ. ಅಣ್ಣಾರಾಯ್ ಶ್ರೀಶೈಲ್ ಪೂಜಾರಿ ಬಂಧಿತ ಆರೋಪಿ. ಇನ್ನು ಬಂಧಿತ ಆರೋಪಿಯಿಂದ 14 ಲೀಟರ್ ಮದ್ಯ ಜಪ್ತಿಗೈದಿದ್ದಾರೆ. ಅಲ್ಲದೇ, ಇಂಡಿ ವಲಯ ಅಬಕಾರಿ ನಿರೀಕ್ಷಕ ಎಂಎಚ್ ಪಡಸಲಗಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ದಾಳಿಯಲ್ಲಿ ಸಿಬ್ಬಂದಿ ಶಿವಶಂಕರ ಗೋಟ್ಯಾಳ, ಮಂಜುನಾಥ ಬಡಿಗೇರ, ಭೀಮರಾಯ ತಳವಾರ ಪಾಲ್ಗೊಂಡಿದ್ದರು. ಇಂಡಿ ಅಬಕಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.