ಅಕ್ರಮ ಮದ್ಯ ಮಾರಾಟಗಾರರೇ ಕಟ್ಟೆಚ್ಚರ..!
ಇಂಡಿ : ಅಕ್ರಮ ಮದ್ಯ ಮಾರಾಟ ಸಾಬೀತು ಹಿನ್ನೆಲೆ ಆರೋಪಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲೆಯ ಇಂಡಿ ಜೆಎಂಎಫ್‌ಸಿ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.
ಲಗಶೆಪ್ಪ ಸಿದ್ರಾಮ ರೂಗಿ ಶಿಕ್ಷೆಗೊಳಗಾದವರು. ಇನ್ನು 23-10-2021 ರಂದು ಇಂಡಿ ಪಟ್ಟಣದ ಸಾತಪೂರ್ ವಾರ್ಡ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ವೇಳೆ ಅಬಕಾರಿ ಉಪ ನಿರೀಕ್ಷಕರಾದ ಪರೀನಾ ವನಕ್ಯಾಳ ನೇತೃತ್ವದ ತಂಡ ದಾಳಿಗೈದು ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು.
ಇನ್ನೂ ವಾದ ವಿವಾದಗಳನ್ನು ಆಲಿಸಿದ ಜೆಎಂಎಫ್‌ಸಿ ನ್ಯಾಯಾಧೀಶರಾದ ಈಶ್ವರ ಎಸ್‌ಎಂ ಅವರು ಆರೋಪಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಬ್ರಾಹಿಂ ಗಚ್ಚಿನಮಾಲ್ ವಾದ ಮಂಡಿಸಿದರು.