ಅಕ್ರಮ ಪಡಿತರ ಸಾಗಾಟ..! ಒಬ್ವರ ಬಂದನ್..!
ಇಂಡಿ ; ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ವೇಳೆ ಪೊಲೀಸರು ದಾಳಿಗೈದು ಸಾವಿರಾರು ಮೌಲ್ಯದ ಅಕ್ಕಿ ವಶಕ್ಕೆ ಪಡೆದುಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಗ್ರಾಮದ ಬಳಿ ನಡೆದಿದೆ. ಮಂಜುನಾಥ ಅಳ್ಳೋಳ್ಳಿ ಬಂಧಿತ ಆರೋಪಿ. ರಾಹುಲ್ ಪವಾರ್ ಎಂಬಾತ ಪರಾರಿಯಾಗಿದ್ದಾನೆ. ಇನ್ನು ಬಂಧಿತ ಆರೋಪಿಯಿಂದ 14,952 ಮೌಲ್ಯದ 623 ಕೆಜಿ ಅಕ್ಕಿ, ಒಂದು ಬೈಕ್, ಒಂದು ತಾಡಪತ್ರಿ, ಒಂದು ಮಷಿನ್ ಜಪ್ತಿಗೈದಿದ್ದಾರೆ. ಅಲ್ಲದೇ, ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.