ಇಂಡಿ : ಪ್ರತಿ ವರ್ಷದಂತೆ ಈ ವರ್ಷ ಹೋಳಿ ಹಬ್ಬ ಶಾಂತಿಯುತ ಸೌಹಾರ್ದತೆಯಿಂದ ಆಚರಣೆ ಮಾಡಿ, ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಡಿವಾಯ್ ಎಸ್ಪಿ ಚಂದ್ರಶೇಖರ ನಂದರೆಡ್ಡಿ ಹೇಳಿದರು.
ಶುಕ್ರವಾರ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಶಾಂತಿ ಸಭೆಯಲ್ಲಿ ಅವರು ಮಾತಾನಾಡಿದ ಅವರು, ಸುಖಾ ಸುಮ್ನೆ ಉದ್ದೇಶ ಪೂರ್ವಕವಾಗಿ ಬಣ್ಣ ಎರಚಿ ತಕರಾರು ಮಾಡಿಕೊಳ್ಳೊದು ಬೇಡ. ಅದರಿಂದ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಕಾನೂನು ಚೌಕಟ್ಟಲ್ಲಿ, ಸರಕಾರದ ಮಾರ್ಗಸೂಚಿಯಂತೆ ಹೋಳಿ ಆಚರಣೆ ಮಾಡಿ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ರೈಸ್ ಅಷ್ಟೆಕರ, ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳಂಕೆ ಮಾತಾನಾಡಿದ ಅವರು, ಮಾರ್ಚ್ ೭ ರಂದು ಹೋಳಿ ಆಚರಣೆ ನಗರದ ವಿವಿಧ ಓಣಿಯಲ್ಲಿ ಸುಮಾರು ೫೦ ಕಡೆ ಕಾಮದಹನ ಮಾಡುವ ಸಂಪ್ರದಾಯವಿದೆ. ಮಾರ್ಚ್ ೧೨ ರಂದು ಅದ್ದೂರಿ ಓಕಳಿ ಆಟ ಆಚರಿಸಲಾಗುತ್ತದೆ. ಇನ್ನೂ ಎಲ್ಲಾ ಸಮುದಾಯದವರು ಬಹಳ ಪ್ರೀತಿ ವಿಸ್ವಾಸ ಸೌಹಾರ್ದತೆಯಿಂದ ಓಕಳಿಯಲ್ಲಿ ಮೊದಲಿನಿಂದಲೂ ತೋಡುಗುತ್ತಾ ಬಂದಿದ್ದಾರೆ. ಅದರಂತೆ ಈ ಬಾರಿಯೂ ಶಾಂತಿಯಿಂದ ಹೋಳಿ ಆಚರಣೆ ಮಾಡುತ್ತೆವೆ ಎಂದು ಹೇಳಿದರು.
ನಗರ ಸಿಪಿಐ ರತನಕುಮಾರ ಜೀರಗ್ಯಾಳ ಮಾತಾನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಇಲಾಖೆಯ ಆರೋಗ್ಯ ಅಧಿಕಾರಿ ಸೋಮನಾಯ, ಧರ್ಮರಾಜ ವಾಲಿಕಾರ, ಚಂದ್ರಶೇಖರ ಹೊಸಮನಿ, ನ್ಯಾಯವಾದಿ ಎಸ್ ಜರ ವಾಲಿಕಾರ, ಪ್ರಕಾಶ್ ಬಿರಾದಾರ, ಕಲ್ಲಪ್ಪ ಅಂಜುಟಗಿ ಉಪಸ್ಥಿತರಿದ್ದರು.