ಇಂಡಿ : ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಅಬ್ಬಾಸ್ ಜಮಖಂಡಿ ಮತ್ತು ಉಪಾಧ್ಯಕ್ಷರಾಗಿ ಭೀಮಾಬಾಯಿ ಮೇತ್ರಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಹಂಜಗಿ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಅಬ್ಬಾಸ ಜಮಖಂಡಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಭೀಮಾಬಾಯಿ ಮೇತ್ರಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿಯಾಗಿ ಕೃಷಿ ಮಾರುಕಟ್ಟೆ ಅಧಿಕಾರಿ ಆರ್ ಎಸ್ ರಾಠೋಡ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾ ಇದ್ದರು.
ಇನ್ನೂ ಅದೇ ಸಂದರ್ಭದಲ್ಲಿ ಗ್ರಾಮದ ಪಂಚಾಯತ್ ಸದಸ್ಯರು ಹಾಗೂ ಮುಖಂಡರು ಹುಸೇನಸಾಬ ಲಾಲಸಾಬ ಸಯ್ಯದ, ಸಲಿಮ ಇಬ್ರಾಹಿಮ್ ಸಯ್ಯದ, ಆಸೀಪ ಕಾರಬಾರಿ, ಹುಸೇನಸಾಬ ಮಾಲಾಸಾಬ ಸಯ್ಯದ, ಮೈಬೂಬಸಾಬ ಚಾಂದಸಾಬ ಸಯ್ಯದ, ಅಲ್ಲಾಬಕ್ಷ ಹುಸೇನಸಾಬ ಸಯ್ಯದ ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.