ಇಂದಿನ ತಂತ್ರಜ್ಞಾನ ಯುಗದಲ್ಲಿ ಮರುಕಳಿಸಿದ ಶಿಕ್ಷಕ ವಿದ್ಯಾರ್ಥಿಗಳ ಬಾಂಧವ್ಯ:
ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಶಿಕ್ಷಣ, ಉತ್ತಮ ಗುಣ ಬೆಳೆಸಿಕೊಂಡು ಮನ್ನಡೆಯಬೇಕು:
ಶಾಲೆಗೆ ಕಳಿಸಿದ ಹೆತ್ತವರು ಅಕ್ಷರ ಕಲಿಸಿದ ಗುರುಗಳು ಬದುಕಿನ ಭವಿಷ್ಯದ ರತ್ನಗಳು:
ಅಪಜಲಫುರ : ತಾಲೂಕಿನ ಕರಜಗಿ ಗ್ರಾಮದ ಯಲ್ಲಾಲಿಂಗೆಶ್ವರ ಕಲ್ಯಾಣ ಮಟಂಪದಲ್ಲಿ ಸರಕಾರಿ ಪ್ರೌಢ ಶಾಲೆಯ 2011/2012 ನೇ ಸಾಲಿನ ಹತ್ತನೆ ತರಗತಿಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಗುರುವಂದಾನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಶಿಕ್ಷಕ ರಾವುತಪ್ಪ ಹೊರಪೇಟೆ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಶಿಕ್ಷಣ ಪಡೆಯುವದರೊಂದಿಗೆ ಉತ್ತಮ ಗುಣ ಬೆಳೆಸಿಕೊಂಡು ಮನ್ನಡೆಯಬೇಕು ಎಂದರು.
ನಂತರ ವರ್ಗಾವಣೆಗೊಂಡ ಶಿಕ್ಷಕರಿಗೆ ಮತ್ತು ನಿವೃತ್ತಿಗೊಂಡ ಶಿಕ್ಷಕರಿಗೆ ವಿದ್ಯಾರ್ಥಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಇನ್ನು ವರ್ಗಾವಣೆಗೊಂಡ ಶಿಕ್ಷಕರನ್ನು ವಿದ್ಯಾರ್ಥಿಗಳು ತಬ್ಬಿಕೊಂಡು ಕಾಲಿಗೆ ನಮಸ್ಕರಿಸಿ ವಿದ್ಯಾರ್ಥಿಗಳು ಸರ್ ನಮ್ಮ ಶಾಲೆ ಬಿಟ್ಟು ಹೊಗ್ಬೇಡಿ, ನಿವು ಇಲ್ಲಿಯೆ ಇರಬೇಕು, ನಮಗೆ ಚನ್ನಾಗಿ ಪಾಠ ಮಾಡುತ್ತಿರಿ, ಇನ್ನು ನಾವು ಆಲಿಸಬೇಕು, ನಿಮ್ಮಿಂದ ಮಾರ್ಗದರ್ಶನ ಪಡೆಯಬೇಕು ಎಂದು ವಿದ್ಯಾರ್ಥಿಗಳು ಕಣ್ಣಿರಿಡುತ್ತಾ ಶಿಕ್ಷಕರನ್ನು ಬಿಳಕೊಟ್ಟರು. ನಂತರ ಲಕ್ಷ್ಮಣ ಝಳಕಿ ಮಾತನಾಡಿ ಹೊರಪೇಟೆ ಅವರು ಎಲ್ಲರೊಂದಿಗೆ ಆತ್ಮಿಯವಾಗಿ ಇರುವುದರ ಜೊತೆಗೆ ವಿದ್ಯಾರ್ಥಿಗಳಿಗೆ ವಿಶೇಷ ಸ್ಪರ್ದೆಗಳನ್ನು ನಡೆಸಿದವರು.ಅಲ್ದೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಕಾಪಡಿಕೊಳ್ಳುವದರ ಜೊತೆಗೆ ಉನ್ನತ ಗುರಿ ಸಾಧನೆಗೆ ಪ್ರರಣೆಗೆ ನೀಡುತ್ತಿದ್ದರು ಎಂದರು. ಪ್ರಮುಖರಾದ ಗ್ರಾಮ ಪಂ ಅದ್ಯಕ್ಷ ವಿಠೋಬಾ ಪೂಜಾರಿ, ಮಹಾದೇವಗೌಡ ಕರೂಟಿ, ಬಸೀರ ಚೌಧರಿ, ಈರ್ಪಾನ ಜಮಾದಾರ, ಗೊಲ್ಲಾಣ ಮಲಗಾಣ, ಶಂಕರಲಿಂಗ ಬಳ್ಳೋಳಿ, ಸಲಿಮ ಜಮಾದಾರ, ಶ್ರಿಮಂತ ಗಜಾಕೊಶ, ಸುನಂದಾ ಬಿಂಗೆ, ಲಕ್ಷ್ಮೀ ಮೊಟಗಿ, ಕನ್ಯಾಕುಮಾರಿ, ವಿಜಯಲಕ್ಷ್ಮಿ ಹೆಗಡೆ,
ಈ ಕಾರ್ಯಕ್ರಮದ ಆಯೋಜಕರಾದ ಪೈಗಂಬರ ಜಮಾದಾರ, ರಂಜಾನ ಶೇಷಗಿರಿ, ಲಕ್ಮಿಕಾಂತ ಬಡದಾಳ, ಪುಂಡಲಿಕ, ಮಂಜುನಾಥ ಕುಂಬಾರ, ಸುನೀಲ ಹುಗಾರ, ಅಶೋಕ ದೇವಣಗಾಂವ, ವಿದ್ಯಾಶ್ರೀ ಹೊಸಮನಿ, ರೇಷ್ಮಾ ಜಮಾದಾರ, ಪರಮೇಶ್ವರ ಖರಾತ, ಸದ್ದಾಮ ಗಣ್ಯಾರ, ಸಿದ್ದಣ್ಣಾ ಜಾನಕರ, ಸಂತೋಷ ಅಳ್ಳಗಿ, ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ: ಉಮೇಶ್ ಅಚಲೇರಿ ವೈಸ್ ಆಫ್ ಜನತಾ ಕಲಬುರಗಿ